ವಿದೇಶಿಗರ ಪುಂಡಾಟ..!


17-02-2018 338

ಬೆಂಗಳೂರು: ಸ್ಯಾಂಕಿ ರಸ್ತೆಯಲ್ಲಿ ಬಳಿ ನಿನ್ನೆ ಮಧ್ಯರಾತ್ರಿ ಅನಿವಾಸಿ ಭಾರತೀಯರು, ವಿದೇಶಿ ಪ್ರಜೆಗಳು ಸೇರಿ 7 ಮಂದಿ ತಂಡವೊಂದು ಕಂಠಮಟ್ಟ ಕುಡಿದು ತಪಾಸಣೆ ನಡೆಸಲು ಬಂದ ಸಂಚಾರ ಪೊಲೀಸರೊಂದಿಗೆ ಜಗಳ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ.

ಸ್ಯಾಂಕಿ ರಸ್ತೆಯ ಲೀ ಮೆರಿಡಿಯನ್ ಹೊಟೇಲ್ ಬಳಿ ರಾತ್ರಿ 1.30ರ ವೇಳೆ ಹೈಗ್ರೌಂಡ್ಸ್ ಸಂಚಾರ ಪೊಲೀಸರು ಪಾನಮತ್ತ ಚಾಲಕರ ತಪಾಸಣೆ ನಡೆಸುವಾಗ ಎಂ.ಜಿ ರಸ್ತೆಯಿಂದ ಪಾರ್ಟಿ ಮುಗಿಸಿ ಕುಡಿದು ತಮಿಳುನಾಡು ನೊಂದಣಿಯ ಟಾಟಾ ಸುಮೋದಲ್ಲಿ ಬಂದ ಏಳು ಮಂದಿ ತಪಾಸಣೆ ವೇಳೆ ಸಹಕರಿಸದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಆದರೂ ತಪಾಸಣೆ ಮುಂದುವರೆಸಿದ ಪೊಲೀಸರಿಗೆ ಚಾಲಕ ಸುಂದರೇಶನ್(35) ಮದ್ಯ ಸೇವಿಸಿರುವುದು ಕಂಡುಬಂದಿದೆ. ಸತತ ಒಂದು ಗಂಟೆಗಳ ಕಾಲ ನಾಲ್ವರು ಸಂಚಾರ ಸಿಬ್ಬಂದಿಗಳನ್ನು ಕಾಡಿದ ಅವರು ಅವಾಂತರ ಸೃಷ್ಟಿಸಿ ಕುಡಿದ ಅಮಲಿನಲ್ಲಿ  ರಸ್ತೆಯಲ್ಲೆಲ್ಲಾ ಅಸಭ್ಯವಾಗಿ ವರ್ತಿಸುತ್ತಾ ಪರಾರಿಯಾಗಲು ಕಸರತ್ತು ನಡೆಸಿದರು.

ಪಾರ್ಟಿ ಮಾಡಿ ಬಂದ ಕಾರಿನಲ್ಲಿ ಇಬ್ಬರು ಇಟಲಿ ಮಹಿಳೆಯರು, ಮೂವರು ವಿದೇಶಿ ವ್ಯಕ್ತಿಗಳು , ಒಬ್ಬ ತಮಿಳು ಯುವತಿ, ಮತ್ತೊಬ್ಬ ಮಲೆಯಾಳಿ ಯುವತಿ ಸೇರಿ 7 ಜನರ ಗುಂಪು ಪುಂಡಾಟ ನಡೆಸಿದೆ. ಇವರ ತರಲೆ ನಿಲ್ಲಿಸಲಾಗದೇ ಪರದಾಡಿದ ಪೊಲೀಸರು ತಪಾಸಣೆ ನಡೆಸುವಷ್ಟರಲ್ಲಿ ಸುಸ್ತಾಗಿದ್ದರು. ಕೊನೆಗೂ ಚಾಲಕನನ್ನು ತಪಾಸಣೆ ನಡೆಸಿ ಟಾಟಾ ಸುಮೋ ವಶಕ್ಕೆ ಪಡೆದು ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

foreigners Drunk and drive ಕಂಠಮಟ್ಟ ತಪಾಸಣೆ