'ರಾಜ್ಯದ ಜನರಿಗೆ ಸಾಲ ಭಾಗ್ಯ’-ಶೆಟ್ಟರ್


16-02-2018 723

ಬೆಂಗಳೂರು: ಬಜೆಟ್ ಜನಪರ ಕಾಳಜಿ ಇಲ್ಲದ ಅಂಕಿ ಸಂಖ್ಯೆಗಳ ಸುಳ್ಳಿನ‌ಕಂತೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಂದು ಲಕ್ಷ ಸಾಲಮನ್ನಾ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಸಹಕಾರ ಸಂಘಗಳಲ್ಲಿನ ಸಾಲ ಮಾತ್ರ ಮನ್ನಾ ಮಾಡಿದ್ದಾರೆ. ವಿವಿಧ ಇಲಾಖೆಗಳ ಅನುದಾನವೂ ಕಡಿಮೆಯಾಗಿದೆ. ಕೃಷ್ಣಾ ಯೋಜನೆಗೆ ಮೀಸಲಿಟ್ಟ ಹಣ ಬಳಕೆಯೇ ಆಗಿಲ್ಲ. ಚುನಾವಣೆ ಉದ್ದೇಶದಿಂದ ಕೆಲವು ಯೋಜನೆಗಳನ್ನು ಘೋಷಿಸಿದ್ದಾರೆ. ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಸಾಲ ನಿರ್ವಹಣೆ ಮತ್ತು ಆರ್ಥಿಕ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ರಾಜ್ಯದ ಜನರಿಗೆ ಸಾಲ ಭಾಗ್ಯ ಕೊಟ್ಟಿದ್ದಾರೆ. ಆರನೆ ವೇತನ ಆಯೋಗ ಜಾರಿ ವಿಷಯದಲ್ಲಿ ಸ್ಪಷ್ಟತೆ ಇಲ್ಲದೆ, ಸರ್ಕಾರಿ ನೌಕರರಿಗೂ ಅನ್ಯಾಯ ಮಾಡಿದ್ದಾರೆ. ಇಡೀ ಮೀನುಗಾರರ ಬದಲಿಗೆ ಕಡಿಮೆ ಸಂಖ್ಯೆಯಲ್ಲಿನ‌ ಮಹಿಳಾ ಮೀನುಗಾರರ ಸಾಲ ಮನ್ನಾ ಮಾಡಿದ್ದಾರೆ. ಸುಳ್ಳಿನ ಅನಿಲ ಭಾಗ್ಯ ನೀಡಿದ್ದಾರೆ ಎಂದು ಕಿಡಿಕಾರಿದರು. ಇನ್ನು ಹೊಸ ತಾಲ್ಲೂಕುಗಳ ಮೂಲಭೂತ ಸೌಕರ್ಯಕ್ಕೆ ಹಣ ಕೊಟ್ಟಿಲ್ಲ. ಕೇವಲ ಎರಡು ತಿಂಗಳ ಅವಧಿ ಹೊಂದಿರುವ ಇವರು ಒಂದು ವರ್ಷದ ಬಜೆಟ್ ಮಂಡಿಸಿದ್ದಾರೆ, ಅದು ಜಾರಿಯೇ ಆಗುವುದಿಲ್ಲ ಎಂದರು.

 

 

 


ಒಂದು ಕಮೆಂಟನ್ನು ಬಿಡಿ