ನಡುರಸ್ತೆಯಲ್ಲಿ ಪಲ್ಲಕ್ಕಿ ಇಟ್ಟು ಪ್ರತಿಭಟನೆ


15-02-2018 854

ಕೊಪ್ಪಳ: ಪಲ್ಲಕ್ಕಿ ಉತ್ಸವಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದರಿಂದ, ನಡುರಸ್ತೆಯಲ್ಲಿಯೇ ಪಲ್ಲಕ್ಕಿ ಇಟ್ಟು ರಾತ್ರಿಯಿಡಿ ಗ್ರಾಮಸ್ಥರು ಧರಣಿ ನಡೆಸಿದರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ದೋಟಿಹಾಳ ಗ್ರಾಮದಲ್ಲಿ ಏಳು ದಿನಗಳ ಕಾಲ ನಡೆಯುವ ಸುಖುಮುನೇಶ್ವರ ಜಾತ್ರೆಯ ಕೊನೆ ದಿನದಂದು ಪಲ್ಲಕ್ಕಿ ಮೆರವಣಿಗೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಈ ವೇಳೆ ಗ್ರಾಮಸ್ಥರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಹಲವರನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ.

ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ಪರಂಪರೆಗೆ ಪೊಲೀಸರು ಅಡ್ಡಿ ಪಡಿಸಿದ್ದಾರೆಂದು ಪೊಲೀಸರ ನಡೆ ಖಂಡಿಸಿ ನಡುರಸ್ತೆಯಲ್ಲೇ ಪಲ್ಲಕ್ಕಿ ಇಟ್ಟು ಪ್ರತಿಭಟಿಸಿದ್ದಾರೆ, ಮಹಿಳೆಯರು ಮಕ್ಕಳು ಸೇರಿದಂತೆ ಇಡೀ ಗ್ರಾಮಸ್ಥರು, ಪ್ರತಿಭಟಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

protest Police ಉತ್ಸವ ಜಾತ್ರೆ