ಪ್ರತಿಮೆ ಸ್ಥಾಪನೆಗೆ ಪೈಪೋಟಿ


15-02-2018 528

ಯಾದಗಿರಿ: ಶಹಾಪೂರ ತಾಲ್ಲೂಕು ಚಾಮನಾಳ ಬಸ್ ನಿಲ್ದಾಣದ ಬಳಿ ಸದ್ಗುರು ಸೇವಾಲಾಲ್ ಪ್ರತಿಮೆ ಪ್ರತಿಷ್ಠಾಪನೆ ಸಂದರ್ಭದಲ್ಲಿ ವಾಲ್ಮೀಕಿ ಜನಾಂಗ ಮತ್ತು ಬಂಜಾರ ಸಮುದಾಯದವರ ನಡುವೆ ಘರ್ಷಣೆ ನಡೆದಿದೆ. ಸೇವಾಲಾಲ್ ಜಯಂತಿ ಹಿನ್ನೆಲೆ ಬಂಜಾರ ಸಮುದಾಯದವರು ಚಾಮನಾಳ ಬಸ್ ನಿಲ್ದಾಣದ ಬಳಿ ಸೇವಾಲಾಲ್ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದು, ಇದೇ ಸ್ಥಳದಲ್ಲಿ ವಾಲ್ಮೀಕಿ ಜನಾಂಗದವರೂ ಮಹರ್ಷಿ ವಾಲ್ಮೀಕಿ ಮೂರ್ತಿ ಸ್ಥಾಪನೆಗೆ ಅಡಿಗಲ್ಲು ಹಾಕಲು ಮುಂದಾಗಿದ್ದಾರೆ, ಇದರಿಂದ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ, ಸ್ಥಳಕ್ಕೆ ಬಂದ ಕೆಂಭಾವಿ ಪೊಲೀಸರು ಹೆಚ್ಚಿನ ಘರ್ಷಣೆ ಆಗುವುದನ್ನು ತಪ್ಪಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

sevalal Valmeeki ಜಯಂತಿ ಅಡಿಗಲ್ಲು