ಕೊಲೆ: ನಾಲ್ವರಿಗೆ ಜೀವಾವಧಿ ಶಿಕ್ಷೆ


15-02-2018 233

ಬಾಗಲಕೋಟೆ: ಕೊಟ್ಟ ಸಾಲ ಮರಳಿ ಕೇಳಿದ್ದಕ್ಕೆ ಸಹೋದರಿಯನ್ನೇ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಮಖಂಡಿಯ 1ನೇ ಅಧಿಕ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2013 ಮಾರ್ಚ್ 23ರಂದು ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಮೆಟಗುಡ್ಡ ಗ್ರಾಮದಲ್ಲಿ, ಬೇಬಕ್ಕ ಎಂಬುವರನ್ನು ಕಾರಿನಲ್ಲಿ ಕತ್ತು ಬಿಗಿದು ತನ್ನ ಸ್ವಂತ ಸಹೋದರ ಕಾಳಪ್ಪ ಕಮಕೇರಿ ಕೊಲೆ ಮಾಡಿ, ಬಳಿಕ ಶವವನ್ನು ಸುಟ್ಟು ಹಾಕಿದ್ದ. ಈ ಕೃತ್ಯಕ್ಕೆ ಆನಂದ ಜಕ್ಕಪ್ಪ ಪೂಜಾರಿ, ಇಮಾಮ್ ಸಾಬ್ ಪಾಶ್ಚಾಪುರ, ಮಹಾದೇವ ಹುಲ್ಲೊಳ್ಳಿ ಸಹಕರಿಸಿದ್ದರು. ಕೊಲೆಗೆ ಸಹಕರಿಸಿದ ಇವರು ಕಾಳಪ್ಪನಿಂದ ಒಂದು ಲಕ್ಷ ಹಣ ಪಡೆದಿದ್ದರು.

ತನ್ನ ಸಹೋದರಿಯಿಂದ ಕಾಳಪ್ಪ 20ಲಕ್ಷ ಕೈಸಾಲ ಪಡೆದಿದ್ದ. ಹಣ ಮರಳಿ ನೀಡಲು ವಿಳಂಬ ಮಾಡುತ್ತಿದ್ದು, ಹಣಕ್ಕಾಗಿ ಬೇಬಕ್ಕ ಒತ್ತಾಯ ಮಾಡಿದ್ದರು. ಇದರಿಂದ ಕೆರಳಿದ ಕಾಳಪ್ಪ ಸಾಲ ಹಿಂತಿರುಗಿಸದೆ ಕೊಲೆ ಮಾಡಿದ್ದಾನೆ.

ಪ್ರಕರಣ ಮುಧೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಕುರಿತು ಜಮಖಂಡಿ ನ್ಯಾಯಾಲಯ ವಿಚಾರಣೆ ನಡೆಸಿ, ನ್ಯಾಯಾಧೀಶ ಜಿ.ಎಮ್.ಶೀನಪ್ಪ ಅವರು, ಜೀವಾವಧಿ ಶಿಕ್ಷೆ ಮತ್ತು ಅಪರಾಧಕ್ಕೆ ತಲಾ 1ಲಕ್ಷ 55 ಸಾವಿರ ದಂಡ ವಿಧಿಸಿ, ಆರೋಪಿಗಳಿಂದ ತಲಾ ಒಂದು ಲಕ್ಷ ಮೃತಳ ಕುಟುಂಬಕ್ಕೆ ಪರಿಹಾರಧನ ನೀಡುವಂತೆ ಆದೇಶಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Life expectancy Murder ಕುಟುಂಬ ನ್ಯಾಯಾಲಯ