ತಾಯಂದಿರ ಪಾದ ಪೂಜೆದಿನ..!


14-02-2018 648

ಬೆಳಗಾವಿ: ಬೆಳಗಾವಿಯಲ್ಲಿ ಪ್ರೇಮಿಗಳ ದಿನಾಚರಣೆ ವಿರೋಧಿಸಿ ತಾಯಂದಿರ ಪಾದಪೂಜೆ ಮಾಡಿದ್ದಾರೆ. ಬೆಳಗಾವಿಯ ಗೋಕಾಕ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ತಾಯಂದಿರ ಪಾದ ಪೂಜೆ ಮಾಡಿದ ಶ್ರೀರಾಮ ಸೇನೆ, ಆರ್.ಎಸ್.ಎಸ್ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತರು ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ 20ಕ್ಕೂ ಹೆಚ್ಚು ತಾಯಂದಿರ ಪಾದಪೂಜೆ ಮಾಡಿದ ಕಾರ್ಯಕರ್ತರು, ವಿದೇಶಿ ಸಂಪ್ರದಾಯವನ್ನು ಆಚರಣೆ ಮಾಡದಂತೆ ಆಗ್ರಹಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ