ಲೋಡಿಂಗ್-ಅನ್‌ಲೋಡಿಂಗ್ ಕೆಲಸಗಾರರ ಪ್ರತಿಭಟನೆ


28-04-2017 342

ಲೋಡಿಂಗ್-ಅನ್‌ಲೋಡಿಂಗ್ ಕಾರ್ಮಿಕರಿಗೆ ಭವಿಷ್ಯ ನಿಧಿ, ಪಿಂಚಣಿ ಇನ್ನಿತರ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ರಾಜ್ಯ ಪಾನೀಯ ನಿಗಮ ನಿಯಮಿತ ಹಾಗೂ ಇತರೆ ಸಂಸ್ಥೆಗಳ ಲೋಡಿಂಗ್-ಅನ್‌ಲೋಡಿಂಗ್ ಕೆಲಸಗಾರರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದ ಬಳಿಯಿರುವ ಪಾನೀಯ ನಿಗಮದ ಕೇಂದ್ರ ಕಚೇರಿ ಮುಂದೆ ಸೇರಿದ ನೂರಾರು ಲೋಡಿಂಗ್-ಅನ್‌ಲೋಡಿಂಗ್ ಕಾರ್ಮಿಕರು ಪ್ರತಿಭಟನೆ ನಡೆಸಿ ಪ್ರತಿವರ್ಷಕ್ಕೊಮ್ಮೆ ಬೆಲೆ ಏರಿಕೆ ಆಧಾರದಲ್ಲಿ ಕೂಲಿ ಪರಿಷ್ಕರಣೆ ಮಾಡಬೇಕು. ವೈಜ್ಞಾನಿಕವಾಗಿ ಕೂಲಿ ನಿಗದಿಗೆ ನಿಗಮದಲ್ಲಿ ನಿಯಮಾವಳಿಗಳನ್ನು ರೂಪಿಸುವಂತೆ ಆಗ್ರಹಿಸಿದರು.

ಮದ್ಯಪಾನೀಯ ಉತ್ಪಾದಕರ ಸಂಘ ಮತ್ತು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅವರ ಸಹಕಾರದೊಂದಿಗೆ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಿ ಅಪಘಾತ ಪರಿಹಾರ, ಮರಣ ಪರಿಹಾರ ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

Links :