ಕಲುಷಿತ ನೀರು: ಮತ್ತೊಂದು ಸಾವು


14-02-2018 433

ಶಿವಮೊಗ್ಗ: ಕಲುಷಿತ ನೀರು ಕುಡಿದು ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೇರಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಸ್ಮಾಯಿಲ್(80) ಎಂಬುವರು ಇಂದು ಮೃತಪಟ್ಟಿದ್ದಾರೆ. ಇಸ್ಮಾಯಿಲ್ ಭದ್ರಾವತಿಯ ಮೈದೂಳಲು ಗ್ರಾಮದ ನಿವಾಸಿ. ಗ್ರಾಮ ಪಂಚಾಯತಿಯಿಂದ ಸರಬರಾಜು ಮಾಡಿದ ನೀರು ಕುಡಿದು ಮೂವರು ಮೃತಪಟ್ಟು 45ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಇದೀಗ ಮತ್ತೊಂದು ಸಾವು ಸಂಭವಿಸಿದೆ. ನಿನ್ನೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರಾದ ಕಾಗೋಡು ತಿಮ್ಮಪ್ಪ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

contaminated kagodu thimmappa ಉಸ್ತುವಾರಿ ಅಸ್ವಸ್ಥ