ವ್ಯಕ್ತಿ ಪ್ರಾಣ ತೆಗೆದ ಕುಡುಕರು


13-02-2018 243

ಬೆಂಗಳೂರು: ನಾಲ್ವರು ಯುವಕರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಆರ್‍ಎಂಸಿ ಯಾರ್ಡ್‍ನ ಸಂಜಯ್ ನಗರದಲ್ಲಿ ನಿನ್ನೆ ಮಧ್ಯರಾತ್ರಿ ನಡದಿದೆ.

ಸಂಜಯ್ ಗಾಂಧಿ ನಗರದ ಮಣಿಕಂಠ ಅಲಿಯಾಸ್ ಮಣಿ (28) ಕೊಲೆಯಾದವರು. ಆರ್‍ಎಂಸಿ ಯಾರ್ಡ್‍ನ ವೇರ್ ಹೌಸ್‍ನಲ್ಲಿ ಕೂಲಿ ಕಾರ್ಮಿಕನಾಗಿದ್ದ ಮಣಿ, ರಾತ್ರಿ 12.30ರ ವೇಳೆ ಕುಡಿದು ಮನೆಗೆ ಬರುತ್ತಿದ್ದಾಗ ಮದ್ಯದ ಅಮಲಿನಲ್ಲಿದ್ದ ಪರಿಚಯಸ್ಥನೇ ಆದ ಬಿಲ್ಲು ಎಂಬಾತ ಅಡ್ಡ ಬಂದಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿದ್ದಾಗ ಬಿಲ್ಲು ಬೆಂಬಲಕ್ಕೆ ವಿಜಯ್, ಸುಮನ್ ಎಂಬ ಮತ್ತಿಬ್ಬರು ಪರಿಚಯಸ್ಥ ಕುಡುಕರು ನಿಂತಿದ್ದು, ಆಕ್ರೋಶಗೊಂಡ ಮಣಿ ಚಾಕುವಿನಿಂದ ಬಿಲ್ಲುವಿಗೆ ಇರಿಯಲು ಮುಂದಾಗಿದ್ದಾನೆ.

ಅದೇ ಚಾಕುವನ್ನು ಕಸಿದುಕೊಂಡ ಬಿಲ್ಲು ಸೇರಿ ಮೂವರು ಮಣಿಕಂಠನ ಹೊಟ್ಟೆ ಇನ್ನಿತರ ದೇಹದ ಭಾಗಗಳಿಗೆ ಚುಚ್ಚಿ ಕೊಲೆ ಮಾಡಿದ್ದಾರೆ. ಪ್ರಕರಣ ದಾಖಲಿಸಿರುವ ಆರ್‍ಎಂಸಿ ಯಾರ್ಡ್ ಪೊಲೀಸರು ಕೃತ್ಯವೆಸಗಿದ ಬಿಲ್ಲು, ವಿಜಯ್‍ನನ್ನು ಬಂಧಿಸಿ ತಲೆಮರೆಸಿಕೊಂಡಿರುವ ಸುಮನ್‍ಗಾಗಿ ತೀವ್ರ ಶೋಧ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Murder Rmc yard ಕಾರ್ಮಿಕ ಆಕ್ರೋಶ