ವಿದ್ಯಾರ್ಥಿನಿಯರ ಭಾವಚಿತ್ರ ಅಶ್ಲೀಲ ವೆಬ್ ಸೈಟ್ ಗೆ ಅಪ್ಲೋಡ್ ಹಿನ್ನೆಲೆ ಯುವಕನ ಬಂಧನ


28-04-2017 1406

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಭಾವಚಿತ್ರ ಅಶ್ಲೀಲ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ್ದ ಹಿನ್ನೆಲೆ ಮೈಸೂರು ವಿ.ವಿ.ಯ ಟಾಪರ್ ವಿದ್ಯಾರ್ಥಿಯಿಂದಲೇ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.ಈ ಪ್ರಕರಣ ಸಂಬಂಧ ಓರ್ವ ಯುವಕನನ್ನು ಬಂಧಿಸಲಾಗಿದೆ. ಜಯಂತ್‌ಕುಮಾರ್ ಎಂಬ ವಿವಿ ವಿದ್ಯಾರ್ಥಿಯಿಂದಲೇ ಯುವತಿಯರ ಪೋಟೋಗಳು ಅಪ್‌ಲೋಡ್ ಆಗಿದ್ದ ಕಾರಣ ಜಯಲಕ್ಷೀಪುರಂ ಪೊಲೀಸರಿಂದ ಜಯಕುಮಾರ್ ನನ್ನು ಬಂಧಿಸಲಾಗಿದೆ. ಮಾನಸ ಗಂಗೋತ್ರಿ ಪರಿಸರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಎ.ಜಿ.ದೇವಿಪ್ರಸಾದ್ ವಿರುದ್ಧ ವಿದ್ಯಾರ್ಥಿನಿಯರು ಅನುಮಾನ ವ್ಯಕ್ತಪಡಿಸಿದರು. ಆದರೆ ಬಂಧಿತ ವಿದ್ಯಾರ್ಥಿ ತಾನೇ ಪೋಟೋ ಮತ್ತು ಪೋನ್ ನಂಬರ್ ಅಪ್‌ಲೋಡ್ ಮಾಡಿರುವುದಾಗಿ ತಪ್ಪೊಪ್ಪಿಗೆ ನೀಡಿದ್ದಾನೆ. ವಾರದ ಹಿಂದೆ ಮೈಸೂರು ವಿವಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರ ಫೋಟೋಸ್ LOCANTO ವೆಬ್ ನಲ್ಲಿ ಪ್ರಕಟವಾಗಿದ್ದವು.  ಈ ಕುರಿತು ಜಯಲಕ್ಷೀಪುರಂ ಠಾಣೆಯಲ್ಲಿ ದೂರು ದಾಖಲಾಗಿತ್ತು.                       

Links :ಒಂದು ಕಮೆಂಟನ್ನು ಬಿಡಿ