ಸಾಫ್ಟ್ ವೇರ್ ಎಂಜಿನಿಯರ್ ಜೈಲುಪಾಲು


10-02-2018 454

ಬೆಂಗಳೂರು: ಸಂಗಾತಿಯ ಹೊಟ್ಟೆಗೆ ಕಾಲಿನಿಂದ ಒದ್ದು ಗರ್ಭಪಾತವಾಗುವಂತೆ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್‍ನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಮಾರತ್‍ಹಳ್ಳಿಯ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಜಿ.ಅನುಪಮ್ ದಾಸ್ ಬಂಧಿತ ಆರೋಪಿ. ಕಳೆದ ಎರಡು ವರ್ಷಗಳಿಂದ ಲಿವಿಂಗ್-ಟು-ಗೆದರ್‍ ಎಂಬ ಒಪ್ಪಂದದ ವೈವಾಹಿಕ ಜೀವನದಲ್ಲಿ ತನ್ನ ಜತೆಗಿದ್ದ 24 ವರ್ಷದ ಸಂಗಾತಿಯ ಹೊಟ್ಟೆಗೆ ಒದ್ದು, ಬಲವಂತದಿಂದ ಮಾತ್ರೆ ನುಂಗಿಸಿ ಗರ್ಭಪಾತ ಮಾಡಿಸಿದ ಆರೋಪಕ್ಕಾಗಿ ಆರೋಪಿಯನ್ನು ಬಂಧಿಸಲಾಗಿದೆ.

ದೆಹಲಿ ಮೂಲದ ಸಂತ್ರಸ್ತ ಯುವತಿ ತಮಿಳುನಾಡು ಮೂಲದ ಈವೆಂಟ್ ಮ್ಯಾನೇಜ್‍ಮೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲಸದ ನಿಮಿತ್ತ ನಗರಕ್ಕೆ  ಬಂದಿದ್ದಾಗ ಕಾರ್ಯಕ್ರಮವೊಂದರಲ್ಲಿ ಆರೋಪಿ ಅನುಪಮ್ ದಾಸ್ ಅವರ ಪರಿಚಯವಾಗಿ ಸ್ನೇಹ ಬೆಳೆದು ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆಯಾಗುವ ತೀರ್ಮಾನಕ್ಕೆ ಬಂದು ಒಟ್ಟಿಗೇ ನೆಲೆಸಿದ್ದರು.

ಸ್ವಲ್ಪ ದಿನಗಳ ನಂತರ ಯುವತಿ ಗರ್ಭವತಿಯಾಗಿದ್ದು, ಇದನ್ನು ಆರೋಪಿಯು ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿದ್ದಾಗ, ನಿನ್ನ ಸಂಗಾತಿಯ ಹೊಟ್ಟೆಯಲ್ಲಿ ಹೆಣ್ಣು ಭ್ರೂಣ ಬೆಳೆಯುತ್ತಿದೆ. ಅದು ಜನಿಸಿದ ನಂತರ ನಿನಗೆ ಕೇಡುಗಾಲ ಶುರುವಾಗುತ್ತದೆ'' ಎಂದು ಆತ ಹೇಳಿದ್ದ. ಈ ಮಾತನ್ನು ನಂಬಿ ವಾಪಸ್ ಮನೆಗೆ ಬಂದು ಗರ್ಭಪಾತ ಮಾಡುವಂತೆ ಹೇಳಿದ್ದ. ಅದಕ್ಕೆ ಸಂತ್ರಸ್ತೆ ಒಪ್ಪದಿದ್ದಾಗ ಆಕೆಯ ಹೊಟ್ಟೆಗೆ ಒದ್ದಿದ್ದ. ಜತೆಗೆ ತನ್ನ ಪೋಷಕರ ಜೊತೆ ಸೇರಿ ಆಕೆಗೆ ಬಲವಂತವಾಗಿ ಮಾತ್ರೆ ನುಂಗಿಸಿ ಗರ್ಭಪಾತ ಮಾಡಿಸಿದ್ದ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

pregnancy abortion ಗರ್ಭಪಾತ ಬಲವಂತ