ಕಾಮುಕನಿಗೆ ಬಿತ್ತು ಗೂಸ


10-02-2018 365

ಬೆಂಗಳೂರು: ಆರು ವರ್ಷದ ಬಾಲಕಿ ಬಟ್ಟೆ ಬಿಚ್ಚಲು ಯತ್ನಿಸಿದ ಸೆಕ್ಯೂರಿಟಿ ಗಾರ್ಡ್ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅನೂಜ್ ಕೊಹ್ಲಿ (22) ಎಂಬ ಸೆಕ್ಯುರಿಟಿ ಗಾರ್ಡ್‌ ಈ ಕೃತ್ಯ ಎಸಗಿದ್ದು, ಅಪಾರ್ಟ್‌ಮೆಂಟಿನ ನಿವಾಸಿಗಳೇ ಹಿಗ್ಗಾಮುಗ್ಗಾ ಥಳಿಸಿ, ಮಾರತ್ ಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾರತ್ ಹಳ್ಳಿಯ ಮುನೆಕೊಳಾಲದ ಅಪಾರ್ಟ್‌ಮೆಂಟ್ ನಲ್ಲಿ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಆರೋಪಿ ಅನೂಜ್, ಕೆಳೆದ ಫೆಬ್ರವರಿ 6ರ ಮಧ್ಯಾಹ್ನ ಚಾಕೊಲೇಟ್‌ನ ಆಮಿಷವೊಡ್ಡಿ ಬಾಲಕಿಯನ್ನು ತನ್ನ ಕೋಣೆಗೆ ಕರೆದೊಯ್ದಿದ್ದ. ಕೋಣೆಯಲ್ಲಿ ಬಾಲಕಿ ಬಟ್ಟೆ ಬಿಚ್ಚುತ್ತಿದ್ದಂತೆಯೇ ಬಾಲಕಿ ಅಳಲಾರಂಭಿಸಿದಳು. ಬಾಲಕಿ ಅಳುವಿನ ಶಬ್ದ ಕೇಳಿ ಅಪಾರ್ಟ್‌ಮೆಂಟ್ ನ ನಿವಾಸಿಗಳು ಕೋಣೆ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿದ್ದ ನಿವಾಸಿಗಳು ಅನೂಜ್ ನನ್ನು ಹಿಗ್ಗಾ ಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Sexual harassment posco ಬಾಲಕಿ ಹಿಗ್ಗಾಮುಗ್ಗ