ಗೌಡರ ಗುಣಗಾನ ಮಾಡಿದ ಸಿಂಧ್ಯ..


10-02-2018 577

ಬೆಂಗಳೂರು: ಹಿಂದುಳಿದ ವರ್ಗದ ನಾಯಕರನ್ನು ರಾಜಕೀಯವಾಗಿ ಬೆಳೆಸುವಲ್ಲಿ ದೇವೇಗೌಡರ ಪಾತ್ರ ದೊಡ್ಡದು ಎಂದು ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯ ಹೇಳಿದ್ದಾರೆ. ನಗರದ ಜೆ.ಪಿ.ಭವನದಲ್ಲಿ ಮಾತನಾಡಿದ ಸಿಂಧ್ಯ, ದೇವೇಗೌಡರು ಸ್ವಜನ ಪಕ್ಷಪಾತಿ ಎಂಬ ಆರೋಪವಿದೆ ಆದರೆ, ಅವರು ಹಾಗೆ ಮಾಡಿದ್ದರೆ ಇಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದರು. ಹಿಂದುಳಿದ ವರ್ಗದ ಜನರಿಗೆ ಏನಾದರೂ ಒಳ್ಳೆಯದಾಗಿದೆ ಎಂದರೆ ಅದು ದೇವೇಗೌಡರ ಅಧಿಕಾರಾವಧಿಯಲ್ಲಿ ಮಾತ್ರ, ಈ ಬಗ್ಗೆ ಹಿಂದುಳಿದ ವರ್ಗದ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಪ್ರವಾಸ ಮಾಡುತ್ತೇವೆ,  ಮೈಸೂರು, ಬೆಂಗಳೂರು, ಶಿವಮೊಗ್ಗ, ಬೀದರ್ ಹಾಗೂ ಬೆಳಗಾವಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸುತ್ತೇವೆ ಎಂದು ಸಿಂಧ್ಯ ಹೇಳಿದ್ದಾರೆ.


ಒಂದು ಕಮೆಂಟನ್ನು ಬಿಡಿ