ಸೀನಿಯರ್ಗಳ ಕಿರುಕುಳಕ್ಕೆ ವಿದ್ಯಾರ್ಥಿನಿ ಬಲಿ?


07-02-2018 596

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದ ಸಾಗರ್ ಕಾಲೇಜಿನ ಮೊದಲ ವರ್ಷದ ಎಂಜಿನಿಯರಿಂಗ್  ವಿದ್ಯಾರ್ಥಿ ಮೇಘನಾ (18) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ನೀಡಿದ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳ ಚುನಾವಣೆ ನಂತರ, ಇಬ್ಬರು ಹಿರಿಯ ವಿದ್ಯಾರ್ಥಿಗಳು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತಿದ್ದ ಮೇಘನಾ ಕಳೆದ ಮೂರು ತಿಂಗಳಿನಿಂದ ಕಾಲೇಜಿಗೆ ಹೋಗಿರಲಿಲ್ಲವಂತೆ, ಹೀಗಾಗಿ ತಂದೆ ತಾಯಿ ಆಕೆಗೆ ಬುದ್ಧಿ ಹೇಳಿ ಕಾಲೇಜಿಗೆ ಕಳುಹಿಸಿದ್ದರಂತೆ. ಆದರೆ, ಮನೆಯಿಂದ ಕಾಲೇಜಿಗೆ ಹೊರಟ ಮೇಘನಾ ರಾಜರಾಜೇಶ್ವರಿ ನಗರದ ಚನ್ನಸಂದ್ರದಲ್ಲಿನ ತಮ್ಮ ಮನೆಗೆ ವಾಪಸ್ ಬಂದು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬ್ಯಾಂಕ್ ಉದ್ಯೋಗಿಯಾಗಿರುವ ಮೇಘನಾ ತಂದೆ ಚಂದ್ರಶೇಖರ್ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗ ಮೇಘನಾ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ. ‘ಕೆಲವು ವಿದ್ಯಾರ್ಥಿಗಳು ನಮ್ಮ ಮಗಳಿಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿದ್ದಳು, ನಾವು ಕಾಲೇಜಿಗೆ ಹೋಗಿ ಉಪನ್ಯಾಸಕರ ಜೊತೆ ಮಾತನಾಡಿ, ಆ ಬಳಿಕ ಮಗಳಿಗೆ ಬುದ್ದಿ ಹೇಳಿ ಕಾಲೇಜಿಗೆ ಕಳಿಸಿದ್ದೆವು. ಆದರೆ ಆಕೆ ಕಿರುಕುಳದ ನೋವಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ’ ಎಂದು ತಂದೆ ದೂರು ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

suicide student ಕಿರುಕುಳ ಪ್ರತಿನಿಧಿ