90ಲಕ್ಷ ಮೌಲ್ಯದ ನಕಲಿ ಕೈಗಡಿಯಾರಗಳು ವಶ


06-02-2018 468

ಬೆಂಗಳೂರು: ಪಾಸಿಲ್, ಹಬ್ಲೊಟ್, ತಿಸೋಟ್, ರಾಡೊ, ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ನಕಲಿ ಕೈ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 90 ಲಕ್ಷ ಮೌಲ್ಯದ ನಕಲಿ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಉಪ್ಪಾರಪೇಟೆಯ ಶಿಯಾಬ್, ಹರ್ಷಫ್, ತೌಶಿಬ್, ದಿನೇಶ್ ಕುಮಾರ್ ಹಾಗೂ ಶಫಾನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 90 ಲಕ್ಷ ಮೌಲ್ಯದ ವಿವಿಧ ಪ್ರತಿಷ್ಠಿತ ಕಂಪನಿಗಳ ನಕಲಿ ಕೈ ಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಧಿನಗರದ ಸುಖ್‍ ಸಾಗರ್ ಕಾಂಪ್ಲೆಕ್ಸ್ ನ ಅಂಗಡಿಗಳಲ್ಲಿ ಆರೋಪಿಗಳು ನಕಲಿ ಕೈ ಗಡಿಯಾರಗಳನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳು ಮುಂಬೈ ಇನ್ನಿತರ ಕಡೆಗಳಿಂದ ಪ್ರತಿಷ್ಠಿತ ಕಂಪನಿಗಳ ಕೈ ಗಡಿಯಾರಗಳಿಗೆ ಪೂರ್ಣವಾಗಿ ಹೋಲುವಂತಹ ನಕಲಿ ಕೈ ಗಡಿಯಾರಗಳನ್ನು ತಂದು ಮಾರಾಟ ಮಾಡಿ ಗ್ರಾಹಕರನ್ನು ವಂಚಿಸುತ್ತಿದ್ದರು. ಹಲವು ವರ್ಷಗಳಿಂದ ಆರೋಪಿಗಳು ಈ ದಂಧೆಯಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ಕಂಡು ಬಂದಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Branded watches ಸಿಸಿಬಿ ಗಾಂಧಿನಗರ