ಹಾಲಿನೊಳಗೆ ಬಿದ್ದ ನೊಣದಂತೆ..!


05-02-2018 488

‘ಕೇಂದ್ರ ಸರ್ಕಾರದ ಮಂತ್ರಿಮಂಡಲದಲ್ಲಿರುವ ಯಾವುದೇ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಗೊತ್ತಾದರೆ, ಅವರನ್ನು ಹಾಲಿನೊಳಗೆ ಬಿದ್ದಿರುವ ನೊಣದಂತೆ ತಕ್ಷಣವೇ ತೆಗೆದು ಆಚೆಗೆ ಎಸೆಯುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್, ತ್ರಿಪುರ ರಾಜ್ಯದ ರಾಜಧಾನಿ ಅಗರ್ತಲಾದಲ್ಲಿ ಹೇಳಿದ್ದಾರೆ.

ಚುನಾವಣಾ ಭಾಷಣ ಮಾಡುತ್ತಿದ್ದ ರಾಜ್‌ನಾಥ್ ಸಿಂಗ್, ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು, ತಮ್ಮ ಸರ್ಕಾರದ ಸಚಿವರೊಬ್ಬರ ವಿರುದ್ಧ ಆರೋಪ ಕೇಳಿ ಬಂದರೂ ಕೂಡ, ಅವರನ್ನು ಕೈಬಿಡುವ ಧೈರ್ಯ ತೋರಿಸಲಿಲ್ಲ ಎಂದು ಟೀಕಿಸಿದ್ದಾರೆ. ತ್ರಿಪುರಾದಲ್ಲಿ ದಿನಬಿಟ್ಟು ದಿನ ರಾಜಕೀಯ ಕೊಲೆಗಳು ನಡೆಯುತ್ತಿದ್ದು, ಜನಸಾಮಾನ್ಯರ ಜೀವಕ್ಕೆ ಭದ್ರತೆಯೇ ಇಲ್ಲವಾಗಿದೆ ಎಂದು ಕೇಂದ್ರ ಗೃಹ ಸಚಿವರು ಆರೋಪಿಸಿದ್ದಾರೆ.  ಇದೇ ಫೆಬ್ರವರಿ 18ರಂದು ತ್ರಿಪುರ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ತ್ರಿಪುರಾದಲ್ಲಿ 1993ರಿಂದ ಸತತ 5 ಅವಧಿಗಳಿಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ(ಮಾರ್ಕ್ಸ್‌) ಪಕ್ಷ ಅಧಿಕಾರದಲ್ಲಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Rajnath Singh tripura ಕಮ್ಯುನಿಸ್ಟ್ ಜನಸಾಮಾನ್ಯ