ಪ್ರಹ್ಲಾದ್ ಜೋಶಿಗೆ ಬೆದರಿಕೆ ಪತ್ರ


03-02-2018 358

ಹುಬ್ಬಳ್ಳಿ: ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿಗೆ ಪತ್ರವೊಂದ ಮೂಲಕ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಪತ್ರದಲ್ಲಿ ನಿಮ್ಮ ಬ್ರಾಹ್ಮಣ ಬುದ್ದಿ ಬಿಟ್ಟು ಬಿಡಿ, ನಮ್ಮ‌ ವಿಕೆ ಬಾಸ್ (ವಿನಯ್ ಕುಲಕರ್ಣಿ) ತಂಟೆಗೆ ಬರಬೇಡಿ. ನಿಮ್ಮನ್ನು ನೋಡಿಕೊಳ್ಳುತ್ತವೆ ಎಂದು ಹೆದರಿಸಲಾಗಿದೆ.

ಅಲ್ಲದೇ ಯೋಗಿಶ ಗೌಡ ಕೊಲೆ ಕೇಸನ್ನು ಸಿಬಿಐಗೆ ಒಪ್ಪಿಸಿ ಎಂದು ಹೋರಾಟ ಮಾಡುತ್ತಿರಾ, ನಮ್ಮ ವಿಕೆ ಬಾಸ್ ನ ಒಳಗೆ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಡಿ. ನೀವು ಹುಷಾರಾಗಿರಿ ಇಲ್ಲದಿದ್ದರೇ, ನಿಮಗೂ ಯೋಗೀಶ್ ಗೌಡರಿಗೆ ಆದ ಕಥೆಯೆ ಆಗುತ್ತದೆ, ಇದು ನಿಮಗೆ ಕೊನೆಯ ಎಚ್ಚರಿಕೆ, ಇನ್ಮುಂದೆ ಹುಷಾರಾಗಿರಿ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ಪತ್ರದ‌ ಲಕೋಟೆ ಮೇಲೆ ಮಂಜುನಾಥ ಎಂಬ ಹೆಸರಿದ್ದು, ಬೆದರಿಕೆ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಕಮೀಷನರ್ ಎಂ.ಎನ್.ನಾಗರಾಜ್ ಅವರಿಗೆ ಪತ್ರದ ಸಮೇತ ಲಿಖಿತ ದೂರು ನೀಡಿದ್ದಾರೆ ಜೋಶಿ. ಮೊನ್ನೆಯಷ್ಟೇ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ ರವಿಗೆ ಬೆದರಿಕೆ ಪತ್ರ ಬಂದಿತ್ತು.


ಒಂದು ಕಮೆಂಟನ್ನು ಬಿಡಿ