ಟ್ರಾಫಿಕ್ ಕ್ಲಿಯರ್ ಗೆ ಬಿಜೆಪಿ ಹೊಸ ಪ್ಲಾನ್..!


03-02-2018 758

ಬೆಂಗಳೂರು: ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಮೋದಿ ಕಾರ್ಯಕ್ರಮಕ್ಕೆ ಉದ್ದೇಶ ಪೂರ್ವಕವಾಗಿ ಟ್ರಾಫಿಕ್ ನಿರ್ಮಾಣ ಮಾಡುತ್ತಾರೆ ಅನ್ನೋ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ, ಟ್ರಾಫಿಕ್ ಕ್ಲಿಯರ್ ಮಾಡಲು ಬಿಜೆಪಿ ಹೊಸ ಪ್ಲಾನ್ ಮಾಡಿದೆ.

ನಗರದಲ್ಲಿ ಕಾರ್ಯಕ್ರಮ ಹಿನ್ನೆಲೆ ಟ್ರಾಫಿಕ್ ಕ್ಲಿಯರ್ ಮಾಡಲು ಬಿಜೆಪಿಯಿಂದ ಸ್ವಯಂ ಸೇವಕರನ್ನು ನೇಮಕಮಾಡಲು ನಿರ್ಧರಿಸಿದೆ. ಅದರಂತೆ ಟ್ರಾಫಿಕ್ ಕ್ಲಿಯರ್ ಮಾಡಲು ಟೀಂಗಳನ್ನು ರಚನೆ ಮಾಡಿದೆ. ಟ್ರಾಫಿಕ್ ಟೀಂನಲ್ಲಿ 250 ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದ್ದು, ಮೂರು ಟೀಂಗಳಾಗಿ ಕಾರ್ಯನಿರ್ವಹಿಸಲು ಸನ್ನದ್ಧರಾಗಿದ್ದಾರೆ. ಯಾತ್ರೆಗೆ ಸಂಬಂಧಿಸಿದಂತೆ, ಪ್ರಮುಖ ಸರ್ಕಲ್,  ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಟೀಂ ಕೆಲಸ ಮಾಡಲಿದೆ. ಟ್ರಾಫಿಕ್ ಆಗದಂತೆ ಮುನ್ನೆಚ್ಚರಿಕೆ ಕೈಗೊಂಡು ಸಮಾವೇಶಕ್ಕೆ ಬರುವ ವಾಹನಗಳನ್ನು ಅರಮನೆ ಮೈದಾನದತ್ತ ಕಳುಹಿಸುವ ಜವಾಬ್ದಾರಿ ಈ ಟೀಂನದ್ದಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Narendra Modi Trafic ಸ್ವಯಂ ಸೇವಕ ಸರ್ಕಲ್