ಜೆಡಿಎಸ್ ಗೆ ಚಿಕ್ಕಮಾದು ಫ್ಯಾಮಿಲಿ ಗುಡ್ ಬೈ..?


02-02-2018 663

ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ದಿವಂಗತ ಚಿಕ್ಕಮಾದು ಅವರ ಕುಟುಂಬ ಕಡೆಗಣನೆ ಹಿನ್ನೆಲೆ, ಚಿಕ್ಕಮಾದು ಅವರ ಕುಟುಂಬ ಕಾಂಗ್ರೆಸ್ ಸೇರಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಇದೇ ತಿಂಗಳ ಫೆಬ್ರವರಿ 5ಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದೆ ಎನ್ನಲಾಗಿದ್ದು, ಇದರಿಂದ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.

ಚಿಕ್ಕಮಾದು ಪುತ್ರ ಅನಿಲ್ಗೆ ಜೆಡಿಎಸ್ ನಿಂದ ಟಿಕೆಟ್ ಕೈತಪ್ಪುವ ಹಿನ್ನೆಲೆ ಕಾಂಗ್ರೆಸ್ ಕಡೆ ಪಯಣ ಬೆಳೆಸಿರುವುದಾಗಿಯೂ, ಇದೇ ತಿಂಗಳ ಫಬ್ರವರಿ 5ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿಜಯ ಶಂಕರ್ ಜೊತೆ ಕಾಂಗ್ರೆಸ್ ಚಿಕ್ಕಮಾದು ಕುಟುಂಬಸ್ಥರು ಸೇರಲಿದ್ದಾರೆ ಎಂದೆನ್ನಲಾಗಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಅಂತಿಮ ಸುತ್ತಿನ ಮಾತುಕತೆ ಮುಕ್ತಾಯವಾಗಿದ್ದು, ಈ ಕುರಿತಂತೆ ಚಿಕ್ಕಮಾದು ಬೆಂಬಲಿಗರು ಹಿತೈಷಿಗಳ ಅಭಿಪ್ರಾಯವನ್ನೂ ಸಂಗ್ರಹಿಸಿರುವ ಕುಟುಂಬಸ್ಥರು, ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಇನ್ನು ಈಗಾಗಲೇ ಫ್ಲೆಕ್ಸ್ ಗಳಲ್ಲಿ ಚಿಕ್ಕಮಾದು ಪುತ್ರ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಗುರುತಿಸಿಕೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Chikkamadu JDS ಹಿತೈಷಿ ಟಿಕೆಟ್