ಮುದ್ದೇಬಿಹಾಳ ಪುರಸಭೆ ವಿರುದ್ಧ ಜೆಡಿಎಸ್ ಆಕ್ರೋಶ


02-02-2018 449

ವಿಜಯಪುರ: ಜೆಡಿಎಸ್ ಕುಮಾರಪರ್ವ ಕಾರ್ಯಕ್ರಮದ ಹಿನ್ನೆಲೆ, ವಿಜಯಪುರದಲ್ಲಿ ಸ್ವಾಗತ ಕೋರಲು ಪಟ್ಟಣದ ಮುಖ್ಯ ರಸ್ತೆಗಳ ಕಂಬಕ್ಕೆ ಕಟ್ಟಿದ್ದ ಜೆಡಿಎಸ್ ಧ್ವಜಗಳನ್ನು ಪುರಸಭೆ ತೆರವುಗೊಳಿಸಿದ್ದು, ಜೆಡಿಎಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರುವ ಜೆಡಿಎಸ್ ಧ್ವಜಗಳನ್ನು ಜಿಲ್ಲೆಯ ಮುದ್ದೇಬಿಹಾಳದ ರಸ್ತೆಗಳಲ್ಲಿ, ಕಟ್ಟಿದ್ದು, ಅವುಗಳನ್ನು ತೆರವುಗೊಳಿಸಲಾಗಿದೆ. ಕಾಂಗ್ರೆಸ್ ಹಿಡಿತದಲ್ಲಿರುವ ಪುರಸಭೆ ಆಡಳಿತ ಏಕಾಏಕಿ ತೆರವು ಕಾರ್ಯ ನಡೆಸಿದೆ. ನಿನ್ನೆಯಷ್ಟೇ ಮುದ್ದೇಬಿಹಾಳದಲ್ಲಿ ಕುಮಾರಸ್ವಾಮಿ ಕಾರ್ಯಕ್ರಮ ನಡೆದಿತ್ತು, ಅಲ್ಲದೇ ಇಂದೂ ಕೂಡ ಕುಮಾರಸ್ವಾಮಿ ಮುದ್ದೇಬಿಹಾಳ ಪಟ್ಟಣದ ಮೂಲಕವೇ ನಾಲತವಾಡ ಪಟ್ಟಣಕ್ಕೆ ತೆರಳಲಿದ್ದು, ಆದರೂ ಸಹ ಅವರ ನಿರ್ಗಮನಕ್ಕೂ ಮುನ್ನವೇ ತೆರವುಗೊಳಿದ್ದಾರೆ.

ಇದರಿಂದ ಕೆಂಡಾಮಂಡಲರಾದ ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ, ಪುರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ನಡೆದ ಬೇರೆ ಪಕ್ಷಗಳ, ಸಂಘಟನೆಗಳ ಕಾರ್ಯಕ್ರಮ ಹಿನ್ನೆಲೆ ಕಟ್ಟಿದ್ದ ಪತಾಕೆಗಳ ಸರಮಾಲೆ, ಫ್ಲೆಕ್ಸ್, ಬ್ಯಾನರ್ ವಾರ ಕಳೆದರೂ ತೆರವುಗೊಳಿಸದೆ ಹಾಗೆ ಬಿಟ್ಟಿರುತ್ತಿದ್ದರು ಆದರೆ ಜೆಡಿಎಸ್ ವಿಷಯದಲ್ಲಿ ತುರ್ತಾಗಿ ತೆರವು ಯಾಕೆ ಎಂದು ಜೆಡಿಎಸ್ ಮುಖಂಡರು ಪ್ರಶ್ನಿಸಿದ್ದು, ಮುದ್ದೇಬಿಹಾಳ ಪುರಸಭೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

H.D.kumaraswamy kumara parva ಧ್ವಜ ನಿರ್ಗಮನ