ಜಗತ್ತಿನ ನಿರಾಶ್ರಿತರ ರಾಜಧಾನಿಯೇನು?


01-02-2018 279

ಭಾರತ ದೇಶ ಈ ಜಗತ್ತಿನ ಎಲ್ಲ ನಿರಾಶ್ರಿತರ ರಾಜಧಾನಿಯಾಗಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ. ಭಾರತದಲ್ಲಿ ಆಶ್ರಯಪಡೆದಿರುವ 40 ಸಾವಿರಕ್ಕೂ ಹೆಚ್ಚು ಮ್ಯಾನ್‌ಮಾರ್ ದೇಶದ ರೋಹಿಂಗ್ಯಾ ನಿರಾಶ್ರಿತರನ್ನು ವಾಪಸ್ ಕಳಿಸುವ ಬಗ್ಗೆ ವಿಚಾರಣೆ ವೇಳೆ ಸರ್ಕಾರ ಈ ರೀತಿಯ ನಿಲುವು ತಳೆದಿದೆ. ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್ ಕಳಿಸುವ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಸಲಹೆಯಂತೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.‘ನಿರಾಶ್ರಿತರು ಎಂದು ಹೇಳಿಕೊಂಡು ಬಂದ ಎಲ್ಲರಿಗೂ ನಾವು ಆಶ್ರಯ ಕೊಡುತ್ತಾ ಹೋದಲ್ಲಿ, ಜಗತ್ತಿನ ಎಲ್ಲ ಕಡೆಗಳಿಂದಲೂ ಜನಗಳು ಭಾರತದ ಕಡೆಗೆ ಪ್ರವಾಹದಂತೆ ಬಂದುಬಿಡುತ್ತಾರೆ, ಹೀಗಾಗಿ ನಮ್ಮ ದೇಶ ಜಗತ್ತಿನ ನಿರಾಶ್ರಿತರ ರಾಜಧಾನಿಯಾಗುವುದು ಬೇಕಿಲ್ಲ’ ಎಂದು ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟಿಗೆ ತಿಳಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Refuges supreme court ರೋಹಿಂಗ್ಯಾ ನಿರಾಶ್ರಿತರು