'ಮೋದಿ ಅವರೇ ರಾಜಕೀಯ ಬಿಡಿ, ನೀರು ಕೊಡಿ'


31-01-2018 387

ಬೆಂಗಳೂರು: ರಾಜ್ಯದಲ್ಲಿ ಕಳಸಾ ಬಂಡೂರಿ ನಾಲೆಗಳು ಹಾಗೂ ಮಹದಾಯಿ ಯೋಜನೆ ಎರಡೂ ಒಂದೇ ಎನ್ನುವ ಗೊಂದಲ ಹುಟ್ಟಿಸುವ ಮೂಲಕ ಜನ ಸಾಮಾನ್ಯರ ದಿಕ್ಕು ತಪ್ಪಿಸುತ್ತಿರುವ ರಾಜಕೀಯ ಪಕ್ಷಗಳು ಹಾಗೂ ಇದುವರೆಗೂ ಈ ವಿಷಯದ ಬಗ್ಗೆ ತುಟ್ಟಿಬಿಚ್ಚದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ನಾಳೆಯಿಂದ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲು ಜನ ಸಾಮಾನ್ಯರ ಪಕ್ಷ ನಿರ್ಧರಿಸಿದೆ.

ಪಕ್ಷದ ಅಧ್ಯಕ್ಷ ಡಾ.ಡಿ.ಅಯ್ಯಪ್ಪ ಮಾತನಾಡಿ, ಕಳಸಾ ಬಂಡೂರಿ ನಾಲಾ ಯೋಜನೆ ಹಾಗೂ ಮಹದಾಯಿ ತಿರುವು ಯೋಜನೆಗಳೂ ಎರಡು ಒಂದೇ ಪ್ರದೇಶದಲ್ಲಿವೆ ಎನ್ನುವುದನ್ನು ಬಿಟ್ಟರೆ ಇಲ್ಲಿಯ ಯೋಜನೆಗೆ ಬಹಳಷ್ಟು ವ್ಯತ್ಯಾಸವಿದೆ. ಮಹದಾಯಿ ಯೋಜನೆ ನದಿಗೆ ಸಂಬಂಧಿಸಿದ್ದು ಹಾಗೂ ಕರ್ನಾಟಕ, ಗೋವಾ ಹಾಗೂ ಮಹರಾಷ್ಟ್ರ ರಾಜ್ಯದ ಮಧ್ಯೆ ನೀರು ಹಂಚಿಕೆಯ ಬಗ್ಗೆ ಇನ್ನುವರೆಗೂ ಯಾವುದೇ ತಿರ್ಮಾನಗಳು ಆಗಿಲ್ಲ. ಈ ಹಿನ್ನಲೆಯಲ್ಲಿ ಈ ವಿವಾದ ಸಧ್ಯದ ಪರಿಸ್ಥಿತಿಯಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿಲ್ಲ ಎಂದರು.

ಕರ್ನಾಟಕದ ಜ್ವಲಂತ ಸಮಸ್ಯೆಗೆ ಸ್ಪಂದಿಸದ ಪ್ರಧಾನಿಗಳು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಕಾಲಿಡುವುದು ಸರಿಯಲ್ಲ. ಪ್ರಧಾನಿ ಮೋದಿ ಅವರೇ ರಾಜಕೀಯ ಬಿಡಿ, ನೀರು ಕೊಡಿ ಇಲ್ಲದಿದ್ದಲ್ಲಿ ರಾಜ್ಯಕ್ಕೆ ಬರುವುದು ಅವಶ್ಯಕತೆ ಇಲ್ಲ ಎಂದರು.

ಜನ ಸಾಮಾನ್ಯರ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಸಾಹಿತಿ ಚಂಪಾ ಮಾತನಾಡಿ, ಫೆಬ್ರವರಿ 4ರಂದು ಕರೆದಿರುವ ಬಂದ್‍ಗೆ ನಮ್ಮ ಬೆಂಬಲವಿಲ್ಲ. ಮೌನವಾಗಿದ್ದೇ ಪ್ರತಿಭಟನೆ ಮಾಡಲು ಸಾಧ್ಯವಿದೆ. ಆಲ್ಲದೆ ಅನೇಕ ರೀತಿಯ ಪ್ರತಿಭಟನೆ ಮಾಡಲು ಅವಕಾಶವಿದೆ, ಅದನ್ನು ಬಿಟ್ಟು ಕಂಡದ್ದಕ್ಕೆಲ್ಲಾ ಬಂದ್ ಮಾಡುವುದು ತಪ್ಪು ಎಂದರು. ನಾಳೆಯಿಂದ ನಡೆಯಲಿರುವ ಫ್ರೀಡಂ ಪಾರ್ಕ್ ಅನಿದಿಷ್ಟಾವದಿ ಮುಷ್ಕರಕ್ಕೆ ನಾನೂ ಸಾಥ್ ನೀಡುತ್ತಿದ್ದು, ನಾಳೆಯಿಂದ ನಾನು ಕೂಡಾ ಅಹೋರಾತ್ರಿ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.


ಒಂದು ಕಮೆಂಟನ್ನು ಬಿಡಿ