ಡಿಕೆಶಿ ಖಡಕ್ ಎಚ್ಚರಿಕೆ


31-01-2018 579

ಬೆಂಗಳೂರು: ಸಮಯ ವ್ಯರ್ಥ ಮಾಡದೇ ಕೂಡಲೇ ಬೂತ್ ಮಟ್ಟದ ಪ್ರಚಾರದಲ್ಲಿ ತೊಡಗಲು ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ. ಇಂದು ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ, ಬೂತ್ ಮಟ್ಟದ ಸಮಿತಿಗಳಿಗೆ ಡಿಕೆಶಿ ಸೂಚಿಸಿದ್ದಾರೆ. ಸರಕಾರದ ಸಾಧನೆಗಳು, ಬಿಜೆಪಿ ವೈಫಲ್ಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲು ಸಭೆಯಲ್ಲಿ ಸೂಚಿಸಿದ್ದು, ಪಕ್ಷದೊಳಗಿನ ಗೊಂದಲಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಅಭ್ಯರ್ಥಿಗಳ ತೀರ್ಮಾನ ಹೈಕಮಾಂಡ್ ಮಾಡಲಿದೆ ಎಂದರು. ಇನ್ನು ಗುಂಪು ಚಟುವಟಿಕೆ, ಭಿನ್ನಮತ ನಡೆಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬೂತ್ ಸಮಿತಿ ಸದಸ್ಯರಿಗೆ ಸಚಿವ ಡಿಕೆಶಿ ಖಡಕ್ ಎಚ್ಚರಿಕೆ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ