ಜೆಡಿಎಸ್ ಬಂಡಾಯ ಶಾಸಕರಲ್ಲಿ ಆತಂಕ..!


30-01-2018 6821

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಜೆಡಿಸ್ನ 6 ಬಂಡಾಯ ಶಾಸಕರಿಗೆ ಆತಂಕದ ಸುದ್ದಿಯೊಂದು ಹರಿದಾಡುತ್ತಿದ್ದು, ಇದು ಇವರಿಗೆ ಶಾಕಿಂಗ್ ಸುದ್ದಿಯಂತಲೇ ಹೇಳಬಹುದು. ಯಾಕೆಂದರೆ ಕಾಂಗ್ರೆಸ್ ಕ್ಷೇತ್ರವಾರು ಸಮೀಕ್ಷೆಯಲ್ಲಿ ಬಂಡಾಯ ಶಾಸಕರ ಬಗ್ಗೆ ನಕಾರಾತ್ಮಕ ವರದಿ ಬಂದಿದ್ದು, ಕ್ಷೇತ್ರವಾರು ಸಮೀಕ್ಷಾ ವರದಿಯಲ್ಲಿ ಜೆಡಿಎಸ್ನ 6 ಬಂಡಾಯ ಶಾಸಕರ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಮತ್ತೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಜೆಡಿಎಸ್ನ ಬಂಡಾಯ ಶಾಸಕರು.

ಇದರಿಂದ ಜೆಡಿಎಸ್ ಬಂಡಾಯ ಶಾಸಕರಿಗೆ ಟಿಕೆಟ್ ಖಾತರಿ ಕೊಡಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ ಎಂದು ತಿಳಿದು ಬಂದಿದೆ. ಜೆಡಿಎಸ್ ಬಂಡಾಯ ಶಾಸಕರಿಗೆ ಟಿಕೆಟ್ ನೀಡಿದರೆ ಆ ಕ್ಷೇತ್ರಗಳಲ್ಲಿ ಭಿನ್ನಮತ ಸ್ಫೋಟ ಸಾಧ್ಯತೆ ಇದೆ ಎನ್ನಲಾಗಿದ್ದು, ಬಂಡಾಯ ಶಾಸಕರು ಮತ್ತೆ ಆತಂಕದಲ್ಲಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಬಂಡಾಯ ಶಾಸಕರು ಭೇಟಿಯಾಗಿದ್ದು, ಈ ವೇಳೆ ತಮ್ಮ ಖಾಸಗಿ ಸರ್ವೆಯ ವಿವರ ಬರುವವರೆಗೂ ಕಾಯುವಂತೆ ಹೇಳಿ ಕಳುಹಿಸಿದ್ದರು.

ಜೆಡಿಎಸ್ ನಿಂದ ಗೆದ್ದರೂ ಈಗ ಕಾಂಗ್ರೆಸ್ ಸೇರುವ ಹೊಸ್ತಿಲಲ್ಲಿರುವ ಶಾಸಕರು ಇದೀಗ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೆಂಬಲಿಗರು, ಕಾರ್ಯಕರ್ತರ ಜೊತೆ ಸಭೆ ನಡೆಸಲು ಮುಂದಾಗಿದ್ದಾರೆ. ಶಾಸಕ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ನಾಗಮಂಗಲದಲ್ಲಿಂದು ನಡಯುವ ಸಭೆಯಲ್ಲಿ ಮುಂದೇನು ಮಾಡಬೇಕೆಂದು ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದೆನ್ನಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Cheluvaraya Swamy JDS ಬಂಡಾಯ ಶಾಸಕ ಭಿನ್ನಮತ