ದ್ವಿ-ಚಕ್ರವಾಹನ ಸವಾರರಿಗೊಂದು ಸಿಹಿ ಸುದ್ದಿ..!


29-01-2018 4500

ಬೆಂಗಳೂರು: ಬೆಂಗಳೂರು ದ್ವಿ-ಚಕ್ರವಾಹನ ಸವಾರರಿಗೊಂದು ಸಿಹಿ ಸುದ್ದಿ ಇಲ್ಲಿದೆ. ಹೌದು, ಐಎಸ್ಐ ಮಾರ್ಕ್ ಹೆಲ್ಮೆಟ್ ‌ಕಡ್ಡಾಯ ಎಂಬ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ, ನಿಮ್ಮ ಹೆಲ್ಮೆಟ್ ಐಎಸ್ಐ ಮಾರ್ಕ್ ಇರಲೇಬೆಂಕಂತೇನಿಲ್ಲ, ಬದಲಾಗಿ ನಿಮ್ಮ ಜೀವ ರಕ್ಷಣೆಗೆ ಐಎಸ್ಐ ಮಾರ್ಕ್ನ ಅಸಲಿ‌ ಹೆಲ್ಮೆಟ್ ‌ಧರಿಸಲು ನಗರ ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಸಲಹೆ ನೀಡಿದ್ದಾರೆ.  ಪರಿಶೀಲನೆ ವೇಳೆ ಏಕಾಏಕಿ ಹೆಲ್ಮೆಟ್ ಐಎಸ್ಐ ನಾ..ಇಲ್ಲವಾ..ಅನ್ನೋದು‌ ಸಾಬೀತುಪಡಿಸಲು ಸಾಧ್ಯವಿಲ್ಲ. ಅದನ್ನು ಪರೀಕ್ಷಿಸಲು ಲ್ಯಾಬ್ ನಲ್ಲಿ ಟೆಸ್ಟ್ ಮಾಡಬೇಕು, ಕಾರ್ಯಾಚರಣೆ ವೇಳೆ ಪ್ರಾಕ್ಟಿಕಲಿ ಐಎಸ್ಐ ಮಾರ್ಕ್ ಪತ್ತೆಮಾಡಲು ಸಾಧ್ಯವಿಲ್ಲ, ಐಎಸ್ಐ ಮಾರ್ಕ್ ಪತ್ತೆಮಾಡಲು ಮಾನದಂಡಗಳಿಲ್ಲ, ಹೀಗಂತ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ನಿಂದ ನಗರ ಸಂಚಾರಿ ಪೊಲೀಸರಿಗೆ ಪತ್ರ ಬಂದಿದೆ. ಹೀಗಾಗಿ ಫೆಬ್ರವರಿಯಿಂದ ಐಎಸ್ಐ ಹೆಲ್ಮೆಟ್ ಕುರಿತ ಕಾರ್ಯಾಚರಣೆ ಇಲ್ಲ, ಎಂದು ನಗರ ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Helmet ISI ಲ್ಯಾಬ್ ಕಾರ್ಯಾಚರಣೆ