'ನಕಲಿ ಮತದಾರರ ಹಾವಳಿ ಹೆಚ್ಚಾಗ್ತಿದೆ’


29-01-2018 470

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ, ನಕಲಿ ಮತದಾರರ ಹಾವಳಿ ಹೆಚ್ಚಾಗುತ್ತಿದೆ ಎಂದು ಆರೋಪಿಸಿ, ಮಾಜಿ ಶಾಸಕ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಮಹದೇವಪುರ ವಲಯದ ಹೊರಮಾವು ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಒಂದೇ ದಿನ ಎರಡು ಸಾವಿರ ಮತದಾರರನ್ನು ಅಧಿಕಾರಿಗಳು ಮತ ಪಟ್ಟಿಗೆ ಸೇರಿಸಿದ್ದಾರೆ ಎಂದು ಆರೋಪಿಸಿದ ನಂದೀಶ್ ರೆಡ್ಡಿ, ಸ್ಥಳೀಯ ಶಾಸಕ ಬಿ.ಎ.ಬಸವರಾಜು ಅವರ ಕೈಗೊಂಬೆಗಳಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆಂದು ದೂರಿದರು. ಸ್ಥಳೀಯ ಶಾಸಕರ ಬೇರೆ ಕ್ಷೇತ್ರದಲ್ಲಿರುವ ಸಂಬಂಧಿಕರನ್ನು ಕೆ.ಆರ್.ಪುರಂ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಿಸುತ್ತಿದ್ದು, ರಜಾ ದಿನಗಳಲ್ಲಿಯೂ ಸಹ ಅಧಿಕಾರಿಗಳು ಕಾರ್ಯನಿರ್ವಹಿಸಿ ಈ ಅಕ್ರಮ ಎಸಗುತ್ತಿದ್ದಾರೆ, ಈ ಕುರಿತು ಪೊಲೀಸರು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Nandiesha Reddy MLA ಮಹದೇವಪುರ ಶಾಸಕ