ಶೆಟ್ಟರ್ ಗೆ ವಿನಯ್ ಕುಲಕರ್ಣಿ ತಿರುಗೇಟು


27-01-2018 574

ಮರಳು ಆಮದು ವಿಷಯದಲ್ಲಿ 5,000 ಕೋಟಿ ಅವ್ಯವಹಾರವಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಆದರೆ ಮಲೇಷ್ಯಾದಿಂದ ಮರಳು ಆಮದು ಮಾಡಿಕೊಂಡಿರುವುದೇ ಈಗ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಐದು ವರ್ಷ ಆಮದು ಮಾಡಿಕೊಂಡು ಅದರ ಒಟ್ಟು ಮೌಲ್ಯ 5,000 ಕೋಟಿ ಆಗಲ್ಲ. ಇದುವರೆಗೆ 37 ಲಕ್ಷ ಮೌಲ್ಯದ 937 ಟನ್ ಮರಳು ಮಾತ್ರ ಆಮದು ಬಂದಿದೆ. ಪ್ರತಿ ದಿನ 12,000 ಟನ್ ತರಿಸಿಕೊಂಡು ಮಾರಾಟ ಮಾಡುವ ಸಾಮರ್ಥ್ಯ ಇರುವ ಯಾವುದೇ ಸಂಸ್ಥೆ ಬೇಕಾದರೂ ಟೆಂಡರ್ ನಲ್ಲಿ ಭಾಗವಹಿಸಬಹುದು ಎಂದರು.

ಮರಳು ಮಾಫಿಯಾವನ್ನು ಹತ್ತಿಕ್ಕಲು ವಿದೇಶಿ ಮರಳು ಆಮದಿಗೆ ನಿರ್ಧಾರ ಮಾಡಿದ್ದು. ಎಂಎಸ್ ಐಎಲ್ ಜತೆಗೆ ಇನ್ನೂ ನಾಲ್ಕಾರು ಸಂಸ್ಥೆಗಳು ಆಮದು ಪ್ರಾರಂಭಿಸಿದರೆ ಸಹಜವಾಗಿಯೇ ದರ ಕಡಿಮೆಯಾಗುತ್ತದೆ. ಎಂ ಸ್ಯಾಂಡ್ ದರಕ್ಕೂ ವಿದೇಶಿ ಮರಳಿನ ದರಕ್ಕೂ ನಾವು ತುಲನೆ ಮಾಡಲು ಸಾಧ್ಯವೇ ಇಲ್ಲ ಎಂದರು. ನಾವೀಗ ಪ್ರತಿ ಟನ್ ಗೆ 4000.ರೂ.ದರದಲ್ಲಿ ವಿದೇಶಿ ಮರಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ, ಬಂದರಿನಲ್ಲೇ ಮರಳು ಪ್ಯಾಕೇಜ್ ಮಾಡಿ ಜಿಎಸ್ ಟಿ ಸೇರಿ ದರ ನಿರ್ಧಾರ ಮಾಡಲಾಗುತ್ತದೆ, ಇಲ್ಲಿ ಅವ್ಯವಹಾರಕ್ಕೆ ಆಸ್ಪದವಿಲ್ಲ ಎಂದರು.


ಒಂದು ಕಮೆಂಟನ್ನು ಬಿಡಿ