ಹ್ಯೂಮ್ಯಾನಿಟಿ ಸೆಟಲೈಟ್ ನೋಡಿ….


25-01-2018 602

ರಾಕೆಟ್ ಲ್ಯಾಬ್ ಎಂಬ ಅಮೆರಿಕದ ಏರೋಸ್ಪೇಸ್ ಸ್ಟಾರ್ಟ್ ಅಪ್ ಅಂದರೆ ನವೋದ್ಯಮ ಸಂಸ್ಥೆ, ಭೂಮಿಯಿಂದಲೇ ಬರಿಗಣ್ಣಿನಲ್ಲಿ ನೋಡಬಹುದಾದ ಹ್ಯೂಮ್ಯಾನಿಟಿ ಸ್ಟಾರ್ ಎಂಬ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡಾಯಿಸಿದೆ.

ಇದು ಕಾರ್ಬನ್ ಫೈಬರ್ ನಿಂದ ನಿರ್ಮಿಸಲಾಗಿರುವ 65 ಪ್ರತಿಫಲನಾತ್ಮಕ ಪ್ಯಾನಲ್‌ಗಳಿರುವ ಒಂದು ಗೋಳ. ಪ್ರತಿ 90 ನಿಮಿಷಗಳಿಗೊಮ್ಮೆ ಭೂಮಿಯ ಸುತ್ತ ಸುತ್ತುವ ಈ ಹ್ಯೂಮ್ಯಾನಿಟಿ ಸ್ಟಾರ್ ಉಪಗ್ರಹವನ್ನು ರಾತ್ರಿ ವೇಳೆ ಯಾವುದೇ ದೂರದರ್ಶಕದ ನೆರವಿಲ್ಲದೆ ಬರಿಗಣ್ಣಿನಲ್ಲಿ ನೋಡಬಹುದಂತೆ. ಜಿಯೋಡೆಸಿಕ್ ಎಂಬ ಕಕ್ಷೆಯಲ್ಲಿ ಸುತ್ತುವ ಈ ಉಪಗ್ರಹ, ಸೂರ್ಯನ ಬೆಳಕನ್ನು ಭೂಮಿಯತ್ತ ಪ್ರತಿಫಲಿಸುತ್ತದೆ. ಈ ಹ್ಯೂಮ್ಯಾನಿಟಿ ಸ್ಟಾರ್ ಉಪಗ್ರಹದ ಆಯುಷ್ಯ ಸುಮಾರು 9 ತಿಂಗಳು ಮಾತ್ರ, ಆನಂತರ ಭೂಮಿಯ ಗುರುತ್ವಾಕರ್ಷಣೆ ಸಿಲುಕಿ ಕೆಳಗೆ ಬೀಳುತ್ತಾ ಉರಿದು ಭಸ್ಮವಾಗುತ್ತದೆ.

‘ಜಗತ್ತಿನ ನಾಗರಿಕರು, ವಿಶ್ವದಲ್ಲಿ ತಮ್ಮ ಸ್ಥಾನ ಎಷ್ಟು ಸೂಕ್ಷ್ಮಅನ್ನುವುದರ ಬಗ್ಗೆ ಯೋಚನೆ ಮಾಡುತ್ತಾ, ಈ ಬದುಕಿನಲ್ಲಿ ತಮಗೆ ಮತ್ತು ಇಡೀ ಮಾನವ ಜನಾಂಗಕ್ಕೆ ಯಾವುದು ಮುಖ್ಯ ಎಂಬುದರ ಬಗ್ಗೆ ಚಿಂತನೆ ನಡೆಸಲು ಉತ್ತೇಜಿಸುವುದೇ ಈ ಉಪಗ್ರಹದ ಉಡಾವಣೆ ಉದ್ದೇಶ’ ಎಂದು ರಾಕೆಟ್ ಲ್ಯಾಬ್ ಸಂಸ್ಥೆಯ ಸಿಇಒ ಪೀಟರ್ ಬೆಕ್ ಹೇಳಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Rocke satelite ಸಿಇಒ ರಾಕೆಟ್ ಲ್ಯಾಬ್