ಬಂದ್ ಗಳ ವಿರುದ್ಧ ಕೋರ್ಟ್ ಮೊರೆ


25-01-2018 499

ಬೆಂಗಳೂರು: 10 ದಿನಗಳಲ್ಲಿ 2 ದಿನ ಬಂದ್ ಗೆ ಕರೆ ನೀಡಿರುವ ಕ್ರಮವನ್ನು ಪ್ರಶ್ನಿಸಿ, ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಮಹದಾಯಿಗಾಗಿ‌ 10 ದಿನಗಳ ಅಂತರದಲ್ಲಿ ಕನ್ನಡ ಚಳುವಳಿ ವಾಟಾಳ್ ಪಕ್ಷ 2 ದಿನ ಬಂದ್ ಗೆ ಕರೆ ನೀಡಿದೆ, ಇದನ್ನು ನಿರ್ಬಂಧಿಸುವಂತೆ ಕೋರಿ ಬೆಂಗಳೂರಿನ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಕನ್ನಡ ಚಳುವಳಿ ವಾಟಾಳ್ ಪಕ್ಷ ಬಂದ್ ಕರೆ ನೀಡಿ, ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ‌ ಮನವಿ ಆಗ್ರಹಿಸಿದೆ. ಆದರೆ ಬಂದ್ ನಿಂದ ಜನರ ಮೂಲಭೂತ ಹಕ್ಕುಗಳಿಗೆ ದಕ್ಕೆಯಾಗುತ್ತಿದೆ ಎಂದವರು ಆರೋಪಿಸಿದ್ದಾರೆ. ಬಂದ್ ಅಸಂವಿಧಾನಿಕ, ಕಾನೂನು ಬಾಹಿರ ಎಂದು ಘೋಷಿಸಬೇಕು ಎಂದು ಆಗ್ರಹಿಸಿರುವ ಅರ್ಜಿದಾರರು, ವಾಟಾಳ್ ನಾಗರಾಜ್ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೇಳಿಕೊಂಡಿದ್ದಾರೆ. ಅದಲ್ಲದೇ ಬಂದ್ ನಿಂದ ಆಗುವ ನಷ್ಟವನ್ನು ವಾಟಾಳ್ರಿಂದ ಸರ್ಕಾರಕ್ಕೆ ಪಾವತಿ ಮಾಡಿಸುವಂತೆ ಮನವಿ ಮಾಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

high court Bandh ವಾಟಾಳ್ ಪಕ್ಷ ಮೂಲಭೂತ ಹಕ್ಕು