ನಾಯಿಗಳೊಂದಿಗೆ ಮೆರವಣಿಗೆ ಮಾಡಿ ಪ್ರತಿಭಟನೆ


25-01-2018 260

ಹಾವೇರಿ: ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಇಂದು ಕನ್ನಡಪರ ಸಂಘಟನೆಗಳು ನೀಡಿರುವ ಬಂದ್ ಗೆ ಹಾವೇರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾನವ ಹಕ್ಕುಗಳು ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದೆ. ಕೇಂದ್ರ ಮತ್ತು, ಗೋವಾ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ನಾಯಿಗಳ ಮೆರವಣಿಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿಗಳಿಗೆ ಗೋವಾ ಸರ್ಕಾರ ಎಂಬ ಬೋರ್ಡನ್ನು ಹಾಕಿ ಮಹದಾಯಿ ವಿಚಾರದಲ್ಲಿ ನಾಯಿಗಳ ರೀತಿ ಕಚ್ಚಾಡುತ್ತಿರುವ ರಾಜರಾರಣಿಗಳು ಎಂದು ದೂರಿದ ಪ್ರತಿಭಟನಾಕಾರರು, ರಾಜಕಾರಣಿಗಳ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅದಲ್ಲದೇ 15 ದಿನಗಳಲ್ಲಿ ವಿವಾದ ಇತ್ಯರ್ಥ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Protest corruption ಇತ್ಯರ್ಥ ಆಕ್ರೋಶ