ಕೋಲಾರದಲ್ಲಿ ಸಂಚಾರ ಸಂಪೂರ್ಣ ಸ್ಥಗಿತ


25-01-2018 263

ಕೋಲಾರ: ಮಹದಾಯಿ ನದಿ ಯೋಜನೆ ವಿವಾದ ಬಗೆಹರಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ಸಂಘಟನೆಗಳಿಂದ ಬಂದ್ ಹಿನ್ನೆಲೆ, ಕೋಲಾರದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬಸ್ಗಳಿಲ್ಲದೆ ಬಸ್ ನಿಲ್ದಾಣದ‌ ಖಾಲಿ ಖಾಲಿ ಕಂಡುಬಂದಿದ್ದು, ಪ್ರಯಾಣಿಕರ ಪರದಾಡುವಂತಾಗಿದೆ. ಇನ್ನು ಬಂದ್ ನಿಮಿತ್ತ ಯಾವುದೇ ಸಂಘಟನೆಗಳು ಬೀದಿಗಿಳಿದಿಲ್ಲ. ಹೋಟೆಲ್ಗಳು ಎಂದಿನಂತೆ ಮುಂದುವರೆದಿವೆ. ಬಂದ್ ಪ್ರಯುಕ್ತ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಶಾಲಾ ಕಾಲೇಜು ಮುಚ್ಚಿವೆ. ಕೊಲಾರದಲ್ಲಿ ಸ್ವಯಂ ಪ್ರೇರಿತ ಬಂದ್ ಹೆಚ್ಚಾಗಿ ಕಂಡುಬಂದಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

BMTC KSRTC ಮಹದಾಯಿ ಸರ್ಕಾರಿ