ಬಸ್ ನಿಲ್ದಾಣಕ್ಕೆ ಸಿಂಹ ದಿಢೀರ್ ಭೇಟಿ


25-01-2018 531

ಮೈಸೂರು: ಕನ್ನಡಪರ ಸಂಘಟನೆಗಳಿಂದ ಇಂದು ಕರ್ನಾಟಕ ಬಂದ್ ಹಿನ್ನೆಲೆ, ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಂಸದ ಪ್ರತಾಪ್ ಸಿಂಹ ದಿಢೀರ್ ಭೇಟಿ ನೀಡಿದ್ದಾರೆ. ಬಸ್ ನಿಲ್ಲಿಸಿದ್ದಕ್ಕೆ ಪೊಲೀಸರಿಂದ ಮಾಹಿತಿ ಕೇಳಿದ ಪ್ರತಾಪ್‌ಸಿಂಹ, ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಕುಳಿತಿದ್ದ ಪ್ರಯಾಣಿಕರನ್ನ ಮಾತನಾಡಿಸಿ, ಜನರ ಸಮಸ್ಯೆ ಆಲಿಸಿದರು. ಇನ್ನು ಸ್ಥಳದಲ್ಲೇ ಅಧಿಕಾರಿಗಳನ್ನು ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡ ಅವರು, ಯಾಕಾಗಿ ಬಸ್ ನಿಲ್ಲಿಸಿದ್ದೀರಿ ಎಂದು, ಅಧಿಕಾರಿಗಳನ್ನು ಪ್ರಶ್ನಿಸಿ, ಬಸ್ ನಿಲ್ದಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Karnataka Bandh Mysore ಪ್ರತಾಪ್ ಸಿಂಹ ಅಧಿಕಾರಿ