ನಾನು ರೈತ ಆಗಲ್ಲ…


25-01-2018 853

ಭಾರತವನ್ನು ಇವತ್ತಿಗೂ ಕೃಷಿ ಪ್ರಧಾನ ದೇಶ ಎಂದೇ ಕರೆಯಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವಕ ಯುವತಿಯರು ಕೃಷಿ ಅಥವ ಬೇಸಾಯವನ್ನು ತಮ್ಮ ವೃತ್ತಿಯಾಗಿಸಿಕೊಳ್ಳಲು ಇಷ್ಟಪಡುತ್ತಿಲ್ಲ. ಬದಲಿಗೆ ಅವರು ಭಾರತೀಯ ಸೇನೆಯ ಯೋಧ, ಎಂಜಿನಿಯರ್, ಶಿಕ್ಷಕ, ನರ್ಸ್‌ ಇತ್ಯಾದಿ ಆಗಲು ಬಯಸುತ್ತಿದ್ದಾರೆಂದು ಶಿಕ್ಷಣಕ್ಕೆ ಸಂಬಂಧಿಸಿದ ಒಂದು ಸಮೀಕ್ಷೆ ಹೇಳುತ್ತಿದೆ.

ಗ್ರಾಮೀಣ ಭಾಗದ ಯುವ ಜನತೆಯಲ್ಲಿ ಶೇಕಡ 1.2ರಷ್ಟು ಜನ ಮಾತ್ರ ರೈತರಾಗಿ ಮುಂದುವರೆಯಲು ಇಷ್ಟಪಡುತ್ತಾರೆ. ಉಳಿದವರಲ್ಲಿ ಶೇ.18ರಷ್ಟು ಹುಡುಗರು ಪೊಲೀಸ್ ಸೇವೆ ಮತ್ತು ಶೇ.12 ರಷ್ಟು ಎಂಜಿನಿಯರ್ಗಳಾಗಲು ಬಯಸುತ್ತಾರೆ. ಯುವತಿಯರಲ್ಲಿ ಶೇ.25ರಷ್ಟು ಜನ ಶಿಕ್ಷಕಿಯರಾಗಲು ಇಷ್ಟಪಟ್ಟರೆ, ಶೇ.12ರಷ್ಟು ಜನ ಡಾಕ್ಟರ್ ಅಥವ ನರ್ಸ್‌ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕೃಷಿ ಕಸುಬು ಲಾಭದಾಯಕವಲ್ಲದೇ ಇರುವುದರಿಂದ, ಗ್ರಾಮೀಣ ಪ್ರದೇಶದ ಜನರು ಬದಲಿ ಉದ್ಯೋಗಗಳನ್ನು ಮಾಡಲು ಬಯಸುತ್ತಾರೆ. ಹೀಗಾಗಿ, ಅನುಕೂಲಸ್ಥ ರೈತರ ಕುಟುಂಬ ತಮ್ಮ ಮಕ್ಕಳು ಚೆನ್ನಾಗಿ ಓದಿ ಅಧಿಕಾರಿ, ಡಾಕ್ಟರ್ ಅಥವ ಎಂಜಿನಿಯರ್‌ ಇತ್ಯಾದಿ ಆಗಲೆಂದು ಬಯಸಿದರೆ, ಬಡ ರೈತರು ತಮ್ಮ ಮಕ್ಕಳು ಸರ್ಕಾರಿ ಕಚೇರಿಯಲ್ಲಿ ಜವಾನರಾದರೂ ಸರಿಯೇ ವ್ಯವಸಾಯವನ್ನು ನೆಚ್ಚಿಕೊಳ್ಳುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದರ ಜೊತೆಗೆ, ಕೃಷಿಯನ್ನೇ ನಂಬಿ ಜೀವನ ಮಾಡುವಂಥ ಪರಿಸ್ಥಿತಿ ಇರುವಂಥವರಿಗೆ ಮದುವೆಯಾಗಲು ಹೆಣ್ಣು ಸಿಗುವುದೂ ಕಷ್ಟವಾಗುತ್ತಿದೆ. ದೇಶಾದ್ಯಂತ ಇರುವ ಇಂಥ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರಗಳು ಎಚ್ಚೆತ್ತುಕೊಂಡು ಕೃಷಿಯನ್ನು ಲಾಭದಾಯಕವಾಗಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮುಂದೊಂದು ದಿನ, ಆಹಾರಕ್ಕಾಗಿ ಆಹಾಕಾರ ಪಡೆಬೇಕಾದ ಪರಿಸ್ಥಿತಿ ಬರಬಹುದು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Agriculture modernisation ಎಂಜಿನಿಯರ್ ಯೋಧ