ಪರಂ ಮತ್ತು ಸಿದ್ದು ನಡುವೆ ಕೋಲ್ಡ್ ವಾರ್...?


24-01-2018 587

ಬೆಂಗಳೂರು: ರಾಹುಲ್ ಗಾಂಧಿ ರಾಜ್ಯ ಪ್ರವಾಸ ವಿಚಾರದಲ್ಲಿ ಸಿಎಂ ಹಾಗೂ ಪಕ್ಷದ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎಂಬ ಅನುಮಾನಗಳು ಕಾಡುತ್ತಿವೆ. ಬೆಂಗಳೂರಿನಲ್ಲೇ ಎಐಸಿಸಿ ಅಧ್ಯಕ್ಷರ ಮೊದಲ ಕಾರ್ಯಕ್ರಮ ನಡೆಯಬೇಕಿತ್ತು ಅನ್ನೋದು ಕೆಪಿಸಿಸಿ ಆಸೆಯಾಗಿತ್ತು. ಆದರೆ ಸಿಎಂ ನಡೆಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿಕೆಶಿ ಬೇಜಾರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿನಲ್ಲಿ 5ಲಕ್ಷ ಜನ ಸೇರಿಸಿ ದೊಡ್ಡ ಸಮಾವೇಶ ಮಾಡೋ ಇಚ್ಚೆ ಕೆಪಿಸಿಸಿಯದ್ದಾಗಿತ್ತು, ಈ ಮೂಲಕ ಈಡೀ ರಾಜ್ಯಕ್ಕೆ ಕಾಂಗ್ರೆಸ್ ಸಮಾವೇಶ ಭರ್ಜರಿಯಾಗಿ ನಡೆಯಿತು ಅನ್ನೋ ಮಸೇಜ್ ಕೊಡಬೇಕಿತ್ತು. ಆದರೆ ಸಿಎಂ ಮಾತ್ರ ಇದಕ್ಕೆ ಒಪ್ಪಿಲ್ಲ,  ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಮಾವೇಶ ನಡೆಯಬೇಕೆಂದು ಸಿಎಂ ಹಠಕ್ಕೆ ಬಿದ್ದಿದ್ದು, ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡ ಕೆಲ ಸಚಿವರು ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಎಲ್ಲಾ ಕೆಲಸ ಬಿಟ್ಟು ವಾರದಲ್ಲಿ ಎರಡು ದಿನ ಹೈ-ಕರ್ನಾಟಕಕ್ಕೆ ಹೋಗಬೇಕು, ಬೆಂಗಳೂರಿನಲ್ಲಿ ಸಮಾವೇಶ ನಡೆದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ, ಆದರೆ ಸಿಎಂ ಇದ್ಯಾವುದಕ್ಕೂ ತಲೆ ಕೆಡೆಸಿಕೊಳ್ಳದೇ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮೊದಲ ಪ್ರವಾಸ, ಎರಡನೇ ಪ್ರವಾಸ ಉತ್ತರ ಕರ್ನಾಟಕ ಭಾಗದಲ್ಲಿ ಮಾಡಲು ತೀರ್ಮಾನಿಸಿದ್ದಾರೆ. ಇದು ಕೆಪಿಸಿಸಿ ಪ್ರಮುಖ ನಾಯಕರನ್ನು ಕೆರಳಿಸಿದೆ ಎನ್ನಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

siddaramaiah Kpcc ಸಮಾವೇಶ ರಾಹುಲ್ ಗಾಂಧಿ