ಕಾಡಾನೆಗಳ ದಾಳಿ: ಕೊಡಗು ಬಂದ್ ಎಚ್ಚರಿಕೆ


23-01-2018 517

ಕೊಡಗು: ಕೊಡಗಿನಲ್ಲಿ ನಿರಂತರ ಕಾಡಾನೆಗಳ ದಾಳಿಗಳಿಂದ ತತ್ತರಿಸಿರುವ ಜನರು ಜಿಲ್ಲಾಡಳಿತದ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಕಾಡಾನೆಗಳ ದಾಳಿ ಖಂಡಿಸಿ ಕೊಡಗು ಜಿಲ್ಲೆಯ ಸಿದ್ದಾಪುರದಲ್ಲಿ, ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ವೇಳೆ ಕೆಲ ಕಾಲ ರಸ್ತೆ ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಶಾಶ್ವತವಾಗಿ ಕಾಡನೆ ಹಾವಳಿಗೆ ತಡೆ ಹಾಗು ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಕಾಡನೆ ಹಾವಳಿ ತಡೆಗಟ್ಟದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೊಡಗು ಬಂದ್ ಮಾಡುವುದಾಗಿ ಕಾರ್ಮಿಕ ಸಂಘಟನೆ ಹಾಗು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

wild elephant attack ಬಂದ್ ಪರಿಹಾರ