ಬರುತ್ತಿದೆ ಸ್ವದೇಶಿ ಹೈ ಟೆಕ್ ರೈಲು


23-01-2018 758

ಅಹಮದಾಬಾದ್ ಮತ್ತು ಮುಂಬೈ ನಡುವೆ ಬುಲೆಟ್ ರೈಲು ಬರುವುದಕ್ಕೆ ಕನಿಷ್ಟಪಕ್ಷ ಇನ್ನೂ ಮೂರುವರ್ಷ ಆಗುತ್ತದೆ. ಆದರೆ, ಸ್ವದೇಶಿ ನಿರ್ಮಾಣದ ಹೈ ಸ್ಪೀಡ್ ಮತ್ತು ವರ್ಲ್ಡ್‌ ಕ್ಲಾಸ್ ರೈಲುಗಳನ್ನು ನೋಡಲು ನಾವು ಹೆಚ್ಚು ದಿನಗಳೇನೂ ಕಾಯಬೇಕಿಲ್ಲ. ಜೂನ್ ತಿಂಗಳಿನಿಂದ ದೇಶದಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ವಿಶ್ವದರ್ಜೆ ಗುಣಮಟ್ಟದ ರೈಲುಗಳ ಓಡಾಟ ಆರಂಭವಾಗಲಿದೆ.

ಚೆನ್ನೈ ನಲ್ಲಿರುವ ಇಂಟೆಗ್ರೇಟೆಡ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳನ್ನು ವಿನ್ಯಾಸಗೊಳಿಸಿ ಸಿದ್ಧಪಡಿಸಲಾಗುತ್ತಿದೆ. ಈ ವರ್ಷದಿಂದಲೇ ಸಂಚಾರ ಆರಂಭಿಸುವ ಈ ಹೊಸ ರೈಲನ್ನು ಟ್ರೇನ್ 18 ಎಂದು ಕರೆಯಲಾಗುತ್ತದೆ. ಸಂಪೂರ್ಣ ಹವಾನಿಯಂತ್ರಿತ ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ ವೈಫೈ ವ್ಯವಸ್ಥೆ, ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಎಲ್‌ಇಡಿ ಲೈಟಿಂಗ್, ಸುಖದಾಯಕ ಆಸನಗಳಿರುತ್ತವೆ. ಅತ್ಯಾಧುನಿಕ ಶೈಲಿಯ ಈ ರೈಲುಗಳಲ್ಲಿ, ಆಟೋಮ್ಯಾಟಿಕ್ ಸ್ಲೈಡಿಂಗ್ ಡೋರ್‌ಗಳು ಮತ್ತು ನಿಲ್ದಾಣದಲ್ಲಿ ಮಾತ್ರ ತೆರೆದುಕೊಂಡು ಮತ್ತೆ ಸ್ವಸ್ಥಾನ ಸೇರುವ ಮೆಟ್ಟಿಲುಗಳ ವ್ಯವಸ್ಥೆ ಇರುತ್ತದೆ. ಇದರ ಜೊತೆಗೆ, ಬಯೊ ಟಾಯ್ಲೆಟ್ ಕೂಡ ಇರುತ್ತದೆ.

ಈ ಹೊಸ ರೈಲಿನ ಮೂತಿ, ಗಾಳಿಯನ್ನು ಬೇಧಿಸಿ ಮುಂದೆ ನುಗ್ಗುವಂತೆ ಚೂಪಾಗಿರುತ್ತದೆ. 160 ಕಿಲೋಮೀಟರ್ ವೇಗವನ್ನು ಸಾಧಿಸಬಲ್ಲ ಈ ರೈಲುಗಳಿಗೆ ಬ್ರೇಕ್ ಹಾಕುವುದು ಮತ್ತು ಮತ್ತೆ ವೇಗ ಹೆಚ್ಚಿಸಿಕೊಳ್ಳುವುದಕ್ಕೆ ಕಡಿಮೆ ಸಮಯ ಹಿಡಿಯುತ್ತದೆ. ಹೀಗಾಗಿ, ಯಾವುದೇ ಪ್ರಯಾಣ ಸಮಯವನ್ನು ಹಾಲಿ ಇರುವುದಕ್ಕಿಂತ ಕನಿಷ್ಟ ಶೇ.20 ರಷ್ಟು ಕಡಿಮೆಗೊಳಿಸಲಿವೆ. ಈ ರೈಲುಗಳು, ಶತಾಬ್ದಿ ರೈಲುಗಳ ಬದಲಿಗೆ ಸಂಚಾರ ಆರಂಭಿಸುತ್ತವೆ.

2020ಕ್ಕೆ ಸಂಚಾರ ಆರಂಭಿಸಲಿರುವ ಮತ್ತೊಂದು ಬಗೆಯ ರೈಲುಗಳನ್ನು ಟ್ರೇನ್ 20 ಎಂದು ಹೆಸರಿಸಲಾಗಿದೆ. ಟ್ರೇನ್ 18 ಮತ್ತು ಟ್ರೇನ್ 20 ಎರಡೂ ಹೆಚ್ಚೂ ಕಮ್ಮಿ ಒಂದೇ ರೀತಿಯ ರೈಲುಗಳಾಗಿವೆ. ಆದರೆ, ಟ್ರೇನ್ 18 ರೈಲುಗಳ ಬೋಗಿ ಸ್ಟೇನ್ ಲೆಸ್ ಸ್ಟೀಲ್ ನಿಂದ ನಿರ್ಮಾಣವಾದರೆ ಟ್ರೇನ್ 20 ರೈಲುಗಳು ಅಲ್ಯುಮಿನಿಯಮ್ ನಿಂದ ನಿರ್ಮಾಣ ಮಾಡಲ್ಪಟ್ಟಿರುತ್ತವೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

train 18 hightec ಅಲ್ಯುಮಿನಿಯಮ್ ಕಿಲೋಮೀಟರ್