ರೌಡಿ ಚಂದನ್ ಅಲಿಯಾಸ್ ಚಂದು ಅರೆಸ್ಟ್


22-01-2018 475

ಬೆಂಗಳೂರು: ಹಲ್ಲೆ, ಸುಲಿಗೆ, ವಾಹನಗಳಿಗೆ ಬೆಂಕಿ ಹಚ್ಚುವ ಕೃತ್ಯ ನಡೆಸುತ್ತಿದ್ದ ರೌಡಿ ಚಂದನ್ ಅಲಿಯಾಸ್ ಚಂದುನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ನಂದಿನಿ ಲೇಔಟ್‍ನ ಜೈ ಮಾರುತಿ ನಗರದ ಚಂದನ್ (20)ನನ್ನು ಹಲ್ಲೆ, ಸುಲಿಗೆ, ವಾಹನಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ, 13 ಗಂಭೀರ ಅಪರಾಧಗಳ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

201 ರಲ್ಲಿ ಈತನನ್ನು ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಗೆ ಸೇರಿಸಲಾಗಿದ್ದು, ಕಳೆದ ಎರಡು ತಿಂಗಳಲ್ಲಿ ಮಹಾಲಕ್ಷ್ಮಿ ಲೇಔಟ್ ಹಾಗೂ ನಂದಿನಿ ಲೇಔಟ್‍ನಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದನು. ಈತನ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Goonda extortions ಕಾಯ್ದೆ ಲೇಔಟ್