'ಪ್ರಧಾನಿ ಮೋದಿ ವಚನ ಭ್ರಷ್ಟ'


22-01-2018 2874

ದಾವಣಗೆರೆ: ದೇಶದಲ್ಲಿ ಈಗ ಪೇಶ್ವೆ ಮಾದರಿ ಆಡಳಿತ ನಡೆಯುತ್ತಿದೆ, ಗಾಂಧಿ ನಾಡಿನಲ್ಲಿ ಗೋಡ್ಸೆ ಹಿರೋ ಆಗುತ್ತಿದ್ದಾನೆ ಎಂದು, ಸಾಹಿತಿ ದೇವನೂರ ಮಹಾದೇವ ಹೇಳಿದ್ದಾರೆ. ದಾವಣಗೆರೆ ನಗರದ ರೋಟರಿ ಭವನದಲ್ಲಿ ನಡೆದ ಸ್ವರಾಜ್ ಇಂಡಿಯಾ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಹೇಳಿದಂತೆ ನಡೆದುಕೊಂಡಿಲ್ಲ. ಉದ್ಯೋಗ ಸೃಷ್ಟಿ ಆಗಿಲ್ಲ. ಈ ಕಾರಣಕ್ಕಾಗಿ ಪ್ರಧಾನಿ 'ವಚನ ಭ್ರಷ್ಟ' ಎಂದು ದೂರಿದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದ ಅವರು, ಇದಕ್ಕೆ ಕಾಂಗ್ರೆಸ್ ಕೂಡಾ ಹೊರತಾಗಿಲ್ಲ. ಭರವಸೆ ನೀಡುತ್ತಾರೆ, ಅವುಗಳನ್ನು ಜಾರಿಗೆ ತರಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೊಸ ರಾಜಕೀಯ ಶಕ್ತಿಯ ಆಗತ್ಯವಿದೆ ಪ್ರತಿಪಾದಿಸಿದರು.

 

 

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

devanuru mahadeva Narendra Modi ಗೋಡ್ಸೆ ವಚನ ಭ್ರಷ್ಟ