ಜನಾರ್ದನ ರೆಡ್ಡಿಗೆ ಮತ್ತೆ ಹಿನ್ನಡೆ

ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಲು ಗಾಲಿ ಜನಾರ್ದನ ರೆಡ್ಡಿ ಪ್ರಯತ್ನ ಮತ್ತೆ ವಿಫಲವಾಗಿದೆ. ಈ ಕುರಿತಂತೆ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಜನಾರ್ದನ ರೆಡ್ಡಿಗೆ ಷರತ್ತು ಸಡಿಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗೆ ತೆರಳದಂತೆ ಜಾಮೀನು ನೀಡಿದ್ದ ವೇಳೆ ಕೋರ್ಟ್ ಷರತ್ತು ವಿಧಿಸಿತ್ತು. ಈ ಸಂಬಂಧ ಷರತ್ತು ಸಡಿಲಿಸುವಂತೆ ಕೋರಿ, ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಅರ್ಜಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಷರತ್ತು ಸಡಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿ ಆದೇಶಿಸಿದೆ.
ಒಂದು ಕಮೆಂಟನ್ನು ಬಿಡಿ