ವೇಶ್ಯಾವಾಟಿಕೆ ದಂಧೆ ಮೂವರ ಬಂಧನ


22-01-2018 493

ಬೆಂಗಳೂರು: ಅಪಾರ್ಟ್ಮೆಂಟ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪೊಲೀಸರು, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ನಗರದ ಹೊರವಲಯದ ಚಿಕ್ಕಬಾಣವರ ಬಳಿ ಇರುವ, ಡಿ.ಎಕ್ಸ್ ಮ್ಯಾಕ್ಸ್ ಅಪಾರ್ಟ್ಮೆಂಟ್ ಮೇಲೆ ಪೊಲೀಸರು ದಾಳಿ ಮಾಡಿ,  ಹೈಟೆಕ್ ವ್ಯಶ್ಯಾವಾಟಿಕೆ ನಡೆಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಶಾಹಿದ್ ಶೇಖ್(29), ಭರತ್(32) ಸಲೀಂ ಶೇಖ್(25) ಎಂಬುವರನ್ನು ಬಂಧಿಸಿದ್ದಾರೆ.

ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನು ನಗರಕ್ಕೆ ಕರೆತಂದು, ಇಂಟರ್ನೆಟ್, ಮೊಬೈಲ್, ಮ‌ೂಲಕ ಗ್ರಾಹಕರನ್ನು ಸಂಪರ್ಕಿಸಿ ದಂಧೆ ನಡಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ 3 ಮೊಬೈಲ್,5 ಎಟಿಎಂ ಕಾರ್ಡ್, 2 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಅರೋಪಿಗಳ ವಿರುದ್ಧ, ಸೋಲದೇವನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

prostitution Arrested ದಾಳಿ ವೇಶ್ಯಾವಾಟಿಕೆ