ಬೇಟೆಗೆಂದು ಹೋದವನ ದುರ್ಮರಣ


22-01-2018 455

ಮೈಸೂರು: ಕಾಡು ಹಂದಿ ಬೇಟೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಗುಂಡಿಗೆ ಬಲಿಯಾಗಿರುವ ಘಟನೆಯು ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹಾರೋಹಳ್ಳಿ ಅರಣ್ಯ ಪ್ರದೇಶದ ಸೋಲಿಗರ ಕಾಲೋನಿ ಬಳಿ ಈ ದುರ್ಘಟನೆ ಸಂಭವಿಸಿದೆ. ಕಣಿಯನಹುಂಡಿ ಶಿವಣ್ಣೇಗೌಡ (60) ಎಂದು, ಮೃತ ವ್ಯಕ್ತಿಯನ್ನು ಗುರುತುಸಲಾಗಿದೆ. ನಿನ್ನೆ ತಡರಾತ್ರಿ ಕಾಡು ಹಂದಿ ಬೇಟೆಗೆಂದು ಶಿವಣ್ಣೇಗೌಡನ ಸ್ನೇಹಿತರು ಕರೆದೊಯ್ದಿದ್ದರು. ಇನ್ನು ಈ ವೇಳೆ ಕಾಡು ಹಂದಿಗೆ ಗುಂಡು ಹೊಡೆಯುವ ವೇಳೆ ಆಯತಪ್ಪಿ ಶಿವಣ್ಣೇಗೌಡನಿಗೆ ಗುಂಡು ತಗುಲಿದೆ. ಇದರಿಂದ ಈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಜಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

hunting wild boar ಅರಣ್ಯ ಪರಿಶೀಲನೆ