ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಹಲ್ಲೆ...!


20-01-2018 511

ಬೆಂಗಳೂರು: ಕನ್ನಡದಲ್ಲಿ ಮಾತಾನಾಡು ಎಂದಿದ್ದಕ್ಕೆ ಯುಕರ್ನೊರ್ವನ ಮೇಲೆ ಅಸ್ಸಾಂ ಮೂಲದ ಯುವಕರ ತಂಡ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ವರ್ತೂರಿನಲ್ಲಿ  ಘಟನೆ ನಡೆದಿದೆ. ಕ್ಯಾಬ್ ಚಾಲಕ ಮನು ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ.

ವರ್ತೂರು ಮುಖ್ಯ ರಸ್ತೆಯಲ್ಲಿ ಮನು ತನ್ನ ಕ್ಯಾಬ್ ಚಾಲನೆ ಮಾಡಿಕೊಂಡು ಹೂಗುತ್ತಿದ್ದು, ಈ ವೇಳೆ ಕ್ಯಾಬ್ ಗೆ ಸ್ಕೂಲ್ ವಾಹನ ಡಿಕ್ಕಿ ಹೊಡೆದಿದೆ. ಸ್ಕೂಲ್ ಬಸ್ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನೆ ಮಾಡಿದ್ದಾನೆ ಚಾಲಕ ಮನು. ಇದಕ್ಕೆ ಬಸ್ ಚಾಲಕ ಡಿಕ್ಕಿ ಹೊಡೆದ್ದಕ್ಕೆ ಹಣ ನೀಡುತ್ತೇನೆ ಎಂದು ಅಸ್ಸಾಂ ಯುವಕರು ವಾಸವಿದ್ದ ಕಾಲೋನಿಗೆ ಕರೆದೊಯ್ದಿದ್ದಾನೆ. ಅಲ್ಲಿ ಘಟನೆ ಕುರಿತಂತೆ ಮಾತನಾಡುತ್ತಿದ್ದು, ಹಿಂದಿಯಲ್ಲಿ ಮಾತಾನಾಡುತ್ತಿದ್ದ ಯುವಕರನ್ನು ಮನು ಕನ್ನಡದಲ್ಲಿ ಮಾತನಾಡಿ ಎಂದಿದ್ದಾನೆ. ಇದಕ್ಕೆ ಏಕಾಏಕಿ ಅಸ್ಸಾಂ ಯುವಕರು ಮನು ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತಂತೆ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

cab driver Assam gang ವರ್ತೂರು ಸ್ಕೂಲ್ ಬಸ್