ತಲೆ ಬುರುಡೆಗಳನ್ನು ಕಂಡು ಬೆಚ್ಚಿಬಿದ್ದ ಜನ


19-01-2018 303

ಮೈಸೂರು: ಮೈಸೂರಿನಲ್ಲಿ ಮನುಷ್ಯರ ತಲೆಬುರುಡೆಗಳು ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಮೈಸೂರಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಮೈಸೂರಿನ ವಿಜಯನಗರ ಎರಡನೇ ಹಂತದ ರಸ್ತೆಯಲ್ಲಿ ತಲೆಬುರೆಡೆಗಳು ಕಂಡುಬಂದಿವೆ. ಪ್ಲಾಸ್ಟಿಕ್ ಕವರ್‌ನಲ್ಲಿ 10 ಕ್ಕೂ ಹೆಚ್ಚು ತಲೆ ಬುರುಡೆಗಳ ಅಸ್ತಿಪಂಜರಗಳನ್ನು ಬಿಸಾಡಲಾಗಿದೆ.  ಮಾಟ-ಮಂತ್ರ ಮಾಡುವುದಕ್ಕಾಗಿ ಮನುಷ್ಯರ ತಲೆ ಬುರುಡೆಗಳನ್ನು ತಂದಿರುವ ಶಂಕೆ ವ್ಯಕ್ತವಾಗಿದೆ. ಬೆಳಿಗ್ಗೆಯೇ ಮಾನವರ ತಲೆಬುರುಡೆಯ ಅಸ್ತಿಪಂಜರಗಳನ್ನು ಕಂಡು ಬೆಚ್ಚಿಬಿದ್ದ ಸ್ಥಳೀಯರು, ನಗರ ಪ್ರದೇಶದಲ್ಲಿ ಇದೆಂಥಾ ಘಟನೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Skull Mysore ತಲೆಬುರುಡೆ ಪ್ಲಾಸ್ಟಿಕ್