ಹೋಟೆಲ್ ನಲ್ಲಿ ಅಗ್ನಿ ಅವಘಡ


18-01-2018 414

ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಜಯನಗರದ ನಾಲ್ಕನೇ ಬ್ಲಾಕ್ನ ಬಸ್ ನಿಲ್ದಾಣದ ಪಕ್ಕದಲ್ಲಿರುವ ಉಪಹಾರ ದರ್ಶಿನಿ ಹೋಟೆಲ್ ನಲ್ಲಿ ಸಿಲಿಂಡರ್ ಸ್ಪೋಟ ಸಂಭವಿಸಿದೆ. ಸ್ಟೋಟದ ರಭಸಕ್ಕೆ ಹೋಟೆಲ್ ನ ವಸ್ತುಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿವೆ ಮತ್ತು ಏಕಾಏಕಿ ಸ್ಟೋಟಗೊಂಡಿದ್ದರಿಂದ ಅಲ್ಲಿದ್ದ ಜನರು ಆತಂಕ ಗೊಂಡಿದ್ದಾರೆ. ಸ್ಟೋಟದಿಂದ ಬೆಂಕಿಯ ಕೆನ್ನಾಲಗೆ ಕಟ್ಟಡಕ್ಕೆ ಆವರಿಸುತ್ತಿದ್ದಂತೆ, ಕೂಡಲೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸದ್ಯಕ್ಕೆ ಯಾವುದೇ ಜೀವಹಾನಿ ಬಗ್ಗೆ ವರದಿಯಾಗಿಲ್ಲ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Fire cylinder blast ಅಗ್ನಿಶಾಮಕ ಹೋಟೆಲ್