‘ಬಿಜೆಪಿಗೆ ಸಿಬಿಐ ಮೇಲೆ ದಿಢೀರ್ ವ್ಯಾಮೋಹ’


18-01-2018 364

ಮೈಸೂರು: ಗಣಿ ಹಗರಣ ಎಸ್ಐಟಿ ತನಿಖೆಗೆ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೈಸೂರಿನ ಸುತ್ತೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಎಸ್ಐಟಿ ತನಿಖೆ ಹಸ್ತಾಂತರದಲ್ಲಿ ರಾಜಕೀಯ ಉದ್ದೇಶ ಇಲ್ಲ ಎಂದಿದ್ದಾರೆ. ಹಗರಣದಲ್ಲಿ ಸಾಕ್ಷಾಧಾರಗಳ ಕೊರತೆ ನೆಪ ಒಡ್ಡಿದೆ ಸಿಬಿಐ. ಆದರೆ ಸಿಬಿಐ ತನ್ನ ಪ್ರಾಥಮಿಕ ವರದಿಯಲ್ಲೇ ಹಗರಣ ನಡೆದಿದೆ ಎನ್ನಲಾಗಿದ್ದು, ರಾಜ್ಯ ಸರ್ಕಾರದ ಸಚಿವ ಸಂಪುಟ ಉಪ ಸಮಿತಿ ವರದಿ ಆದರಿಸಿ ಎಸ್ಐಟಿ ತನಿಖೆ ನೀಡಿದ್ದೇವೆ ಎಂದು, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಇನ್ನು ಆರೋಪ ಹೊತ್ತವರಿಂದ ಇಂತಹ ಹೇಳಿಕೆ ಸಹಜ ಎಂದು, ಯಡಿಯೂರಪ್ಪಗೆ ಮತ್ತೆ ಚಾಟಿ ಬೀಸಿದ ಸಿದ್ದರಾಮಯ್ಯ, ಅವರದು ರೆಡ್ಡಿ ಸಹೋದರರನ್ನು ಹಗರಣದಿಂದ ಪಾರು ಮಾಡು ಉದ್ದೇಶ ಎಂದರು. ಯುಪಿಎ ಸರ್ಕಾರ ಇದ್ದಾಗ ಸಿಬಿಐಯನ್ನ ಚೋರ್ ಬಚಾವೊ ಎನ್ನುತಿದ್ದ ಬಿಜೆಪಿ ನಾಯಕರಿಗೆ ಈಗ ಅದೇ ಸಿಬಿಐ ಮೇಲೆ ದಿಢೀರ್ ವ್ಯಾಮೋಹ ಬಂದಿದೆ. ಸಿಬಿಐ ಕಾನೂನಾತ್ಮಕ ತನಿಖೆ ಮಾಡದ ಕಾರಣ ರಾಜ್ಯ ಸರ್ಕಾರದಿಂದ ಎಸ್ಐಟಿ ತನಿಖೆಗೆ ಆದೇಶಿಸಿದೆ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

siddaramaiah CBI ಕಾನೂನಾತ್ಮಕ ವ್ಯಾಮೋಹ