ಅತ್ಯಾಚಾರ: ಬ್ಯಾಂಕ್ ಮ್ಯಾನೇಜರ್ ಬಂಧನ


18-01-2018 567

ರಾಯಚೂರು: ಮದುವೆಯಾಗುವುದಾಗಿ ನಂಬಿಸಿ ದಲಿತ ಮಹಿಳೆ ಮೇಲೆ 5 ತಿಂಗಳಿನಿಂದ ಅತ್ಯಾಚಾರ ಎಸಗಿರುವ ಪ್ರಕರಣ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಆರೋಪಿ ಮಹೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಘಟನೆ ಈ ನಡೆದಿದೆ. ಜಿಲ್ಲೆಯ ಎಸ್.ಬಿ.ಐ ಬ್ಯಾಂಕ್ ಬ್ರಾಂಚ್ ಒಂದರ ಮ್ಯಾನೇಜರ್ ಆದ ಮಹೇಶ್ ಮನೆಯಲ್ಲಿ ಕೆಲಸಕ್ಕಿದ್ದ  ಮಹಿಳೆಗೆ ಮದುವೆಯಾಗುವುದಾಗಿ ಭರವಸೆ ನೀಡಿ, 5 ತಿಂಗಳಿನಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ಇನ್ನು ಮದುವೆಗೆ ಒತ್ತಾಯ ಮಾಡಿದಾಗ ಅದಕ್ಕೆ ನಿರಾಕರಿಸಿ ಜೀವ ಬೆದರಿಕೆ ಹಾಕಿರುವುದಾಗಿಯೂ ತಿಳಿದು ಬಂದಿದೆ. ಒಂದರ ಮನೆಯಿಂದ ಸಂತ್ರಸ್ಥ ಮಹಿಳೆಯನ್ನು ಹೊರಹಾಕಿ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ಥ ಮಹಿಳೆಯು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗ್ರಾಮವೊಂದರ ನಿವಾಸಿಯಾಗಿದ್ದಾರೆ. ಘಟನೆ ಕುರಿತಂತೆ ಸಿಂಧನೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Rape Bank manger ವಿವಾಹಿತ ಲೈಂಗಿಕ