‘ಅನಂತಕುಮಾರ್ ಹೆಗಡೆ ಮಂತ್ರಿಯಾಗಿದ್ದೇ ದುರಂತ’


17-01-2018 564

ಬೆಂಗಳೂರು: ಅನಂತಕುಮಾರ್ ಹೆಗಡೆ ಬಾಯಿ, ಮನಸು ಕೊಳಕು. ಇಂತಹ ಕೊಳಕು ಮನುಷ್ಯ ದೇಶದ ಮಂತ್ರಿಯಾಗಿದ್ದೇ ದುರಂತ ಎಂದು, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್.ಆರ್.ರಮೇಶ್ ಅವರ ಆರೋಪಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆಧಾರವಿಲ್ಲದ ಹೇಳಿಕೆಗೆ ನಾಬು ರಿಯಾಕ್ಟ್ ಮಾಡಲ್ಲ‌ ಎಂದಿದ್ದಾರೆ.

ಬಿಜೆಪಿಯವರು ರಾಜಕಾರಣವನ್ನು ಹಾಳು ಮಾಡುವುದು, ಸಮಾಜವನ್ನು ಒಡೆಯುವುದೇ ಆಗಿದೆ ಎಂದು ದೂರಿದರು. ನಮ್ಮ ಜಿಲ್ಲೆಯಲ್ಲಿ ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್ ಸೆಣಸಾಡಬಹುದೇ ಹೊರತು ಇನ್ಯಾರು ಸೆಣಸಾಡೋಕೆ ಸಾಧ್ಯವಿಲ್ಲ. ಎಲ್ಲ ಜಿಲ್ಲೆಗಳಲ್ಲಿ ಹೇಗೆ ಬಿಜೆಪಿ ಪರಿವರ್ತನಾ ರ‍್ಯಾಲಿ ನಡೆಸಿದ್ದಾರೋ ಹಾಗೆಯೇ ಸುಮ್ಮನೆ ನಮ್ಮ ಜಿಲ್ಲೆಯಲ್ಲೂ ಬಿಜೆಪಿ ಪರಿವರ್ತನಾ ಯಾತ್ರೆ ನಡೆಸುತ್ತಿದೆ ಅಷ್ಟೆ ಎಂದರು.

 


ಒಂದು ಕಮೆಂಟನ್ನು ಬಿಡಿ