ಪೊಲೀಸ್ ಪೇದೆ ಮೇಲೆ ಹಲ್ಲೆ


17-01-2018 360

ಬೆಂಗಳೂರು: ಪೊಲೀಸ್ ಪೇದೆ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಜೆಜೆ ನಗರದ ಪೊಲೀಸ್ ಠಾಣೆಯ ಪೇದೆ ರಾಜೇಂದ್ರ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಂಜಾ ಸೇವಿಸಿ ಜೆಜೆ ನಗರದಲ್ಲಿ ಮನಬಂದಂತೆ ಆಡುತ್ತಾ, ಕೀಟಲೆ ಮಾಡುತ್ತಿವರನ್ನು ನಿಯಂತ್ರಿಸಲಾಗದೆ ಪೊಲೀಸ್ ಕಂಟ್ರೋಲ್ ರೂಂಗೆ ಸ್ಥಳೀಯರು ಕರೆ ಮಾಡಿ ತಿಳಿಸಿದ್ದಾರೆ. ಇನ್ನು ದೂರನ್ನು ದಾಖಲಿಸಿಕೊಂಡು ಹೊಯ್ಸಳ ವಾಹನದಲ್ಲಿ ಪೊಲೀಸ್ ಪೇದೆ ರಾಜೇಂದ್ರ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಗಾಂಜಾ ಮತ್ತಿನಲ್ಲಿದ್ದ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಪೇದೆ ರಾಜೇಂದ್ರ ತಲೆಗೆ ಹಾಗೂ ಅಂಗೈಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜೇಂದ್ರೆ ನಿವೃತ್ತ ಸೈನಿಕರು ಎಂದು ತಿಳಿದು ಬಂದಿದೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ನಡೆಸಿದ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Constable control Room ಪೊಲೀಸ್ ಪೇದೆ ಗಾಂಜಾ