ಅಗ್ನಿಸಾಕ್ಷಿ ಎಂಬ ಒಗಟು


16-01-2018 1062

ಕಲರ್ಸ್ ಚಾನಲ್ ನಲ್ಲಿ ಈಗ್ಗೆ ಕೆಲವು ವರ್ಷಗಳಿಂದ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಎಂಬ ಧಾರಾವಾಹಿ ಎಂಥಾ ಕಥಾ ಹಂದರವನ್ನು ಹೊಂದಿದೆ ಮತ್ತು ಆ ಧಾರಾವಾಹಿಯ ಓಟ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು, ಆದರೂ ಈ ಧಾರಾವಾಹಿ ಕನ್ನಡದ ಟಾಪ್ ಧಾರಾವಾಹಿಯಾಗಿ ಉಳಿದಿರುವುದು ಮಾತ್ರ ಒಂದು ದೊಡ್ಡ ಒಗಟಾಗಿ ಪರಿಣಮಿಸಿದೆ. ಪಾತ್ರಗಳಲ್ಲಿ ನಟ ನಟಿಯರ ಬಾಲಿಶ ನಟನೆ, ಮುಜುಗರ ತರಿಸುವ ಮುದ್ದಾಟ, ಯಾವ ದಿಕ್ಕಿನಲ್ಲೂ ಸಾಗದ ಕಥೆ, ಶಾಲಾ ನಾಟಕಗಳನ್ನು ಹೋಲುವ ಸಂಭಾಷಣೆ, ಚಂದಮಾಮದಲ್ಲಿ ಕಂಡುಬರುವಂಥ ವೈರತ್ವ ಮತ್ತು ಮತ್ಸರ ಈ ಧಾರಾವಾಹಿಯ ಅಸಲಿ ಬಂಡವಾಳ, ಆದರೆ ಪ್ರತೀ ವಾರ 13 ಅಥವ 14 ಪಾಯಿಂಟ್ ಗಳಿಸಿ ಎಲ್ಲಾ ಕಾರ್ಯಕ್ರಮಗಳಿಗಿಂತ ಈ ಧಾರಾವಾಹಿ ಮುಂದಿರುವುದು ಸೋಜಿಗವೇ ಸರಿ. ಅರ್ಕ ಮೀಡಿಯಾ ಪ್ರಸ್ತುತ ಪಡಿಸುವ ಈ ಧಾರಾವಾಹಿಯಲ್ಲಿ ಟಾಪ್ ಸ್ಥಾನಕ್ಕೆ ಏರಿಸುವ ಅಂಶವೇನಿದೆ ಎಂದು ಯೋಚಿಸಿ ಯೋಚಿಸಿ ಬೇರೆ ಟಿವಿ ನಿರ್ದೇಶಕರೆಲ್ಲ ಹೈರಾಣಾಗಿರುವುದು ಈಗ ಇತಿಹಾಸ. ಏನೇ ಆಗಲಿ ಆದರೆ ಅಗ್ನಿಸಾಕ್ಷಿಯ ಟಾಪ್ ಸ್ಥಾನದ ಹಿಂದೆ ವಿಶೇಷ ಕರಾಮತ್ತು ಇರದಿದ್ದರೆ ಸಾಕು ಎಂದು ಮಾತ್ರ ಟಿವಿ ಕ್ಷೇತ್ರ ತಜ್ಞರು ಹೇಳುತ್ತಿದ್ದಾರೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ಅಗ್ನಿಸಾಕ್ಷಿ ಕನ್ನಡ Agnisakshi Colors Channel