ಮೂರು ದಿನಕ್ಕೊಬ್ಬ ಯೋಧ ಹುತಾತ್ಮ


16-01-2018 613

ಇಂಡಿಯನ್ ಆರ್ಮಿ ಅನ್ನುವುದು ಇಡೀ ದೇಶದ ಹೆಮ್ಮೆ. ನಮ್ಮ ಸೇನೆಯ ಯೋಧರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದಾರೆ. ಜನವರಿ 15ರಂದು ತನ್ನ 70ನೇ ಸೇನಾ ದಿನ ಆಚರಿಸಿಕೊಂಡ ಭಾರತೀಯ ಸೇನೆಯ ಹತ್ತು ಲಕ್ಷಕ್ಕೂ ಹೆಚ್ಚು ಯೋಧರ ಪೈಕಿ, ಕಳೆದ 13 ವರ್ಷಗಳಲ್ಲಿ ಪ್ರತಿ ಮೂರು ದಿನಕ್ಕೊಬ್ಬ ಯೋಧ ಹುತಾತ್ಮನಾಗುತ್ತಿದ್ದಾನೆ.

2005 ರಿಂದ 2017ರ ವರೆಗೆ, ಪಾಕ್‌ ಸೇನೆ ಕದನ ವಿರಾಮ ಉಲ್ಲಂಘಿಸಿ ನಡೆಸಿರುವ ಗುಂಡಿನ ದಾಳಿ, ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ, ಶಾಂತಿ ಪಾಲನಾ ಪಡೆಯಲ್ಲಿ ಸೇವೆ ಇತ್ಯಾದಿಗಳಲ್ಲಿ ಸೇನೆಯ ಒಟ್ಟು 1684 ಯೋಧರು ಮೃತಪಟ್ಟಿದ್ದಾರೆ. 2017ರಲ್ಲಿ ಯೋಧರು, ಅಧಿಕಾರಿಗಳು, ಎಂಜಿನಿಯರ್‌ ಗಳು, ವಾಯುಪಡೆಯವರು ಸೇರಿ 87 ಜನ ಹುತಾತ್ಮರಾಗಿದ್ದಾರೆ. 2005ರಲ್ಲಿ ಅತಿ ಹೆಚ್ಚು, ಅಂದರೆ 342 ಯೋಧರು ಮೃತಪಟ್ಟಿದ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

soldiers Army ಪಾಕ್‌ ಸೇನೆ ಹುತಾತ್ಮ